ನಾಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ಮುಂಬಯಿ: ನಾಗೇಶ್ ಕುಕನೂರು ಬಳಿ
ಎಂಟು ಚಿತ್ರಕ್ಕೆ ಸ್ಕ್ರಿಪ್ ತಯಾರಿದೆ. ಆದರೆ ವಿಶೇಷವೆಂದರೆ ಅದರಲ್ಲಿ
ಯಾವುದೂ ಪ್ರೇಮಕಥೆಗಳಲ್ಲ.
`ಎಲ್ಲರೂ ಪ್ರೇಮಕಥೆಗಳನ್ನೇ ಮಾಡುತ್ತಿದ್ದರೇನೇ
ಜನರಿಗೆ ಬೋರಾಗುವುದು.
ಮನುಷ್ಯರಿಗೆ ಬೇರೆ ಬೇರೆ ಭಾವನೆಗಳ ಕುರಿತು ನೋಡಬೇಕೆನಿಸುತ್ತದೆ
ಎಂಬದು ನಾಗೇಶ್ ಅಭಿಮತ.
ಮುಂದಿನ ಚಿತ್ರ ರೋಗಿಗಳ `ವಿಶ್ರಾಂತಿಧಾಮವನ್ನು
ಕುರಿತದ್ದಾಗಿರುತ್ತದೆ. ಇದಲ್ಲದೆ ಇನ್ನೂ ಎಂಟು ಚಿತ್ರಗಳ ಕಥೆ
ತಯಾರಾಗಿದೆ. ಎಲ್ಲವನ್ನೂ ಯುಎಸ್ ಮೂಲದ ಕಂಪೆನಿಯ ಜೊತೆ ಒಪ್ಪಂದ
ಮಾಡಿಕೊಂಡಿದ್ದೇನೆ. ಕಾಪಿರೈಟ್ ತೊಂದರೆಗಳು ಬರದ ಹಾಗೇ
ನೋಡಿಕೊಳ್ಳೊದು ನನ್ನ ರೀತಿ ಎಂದು ನಾಗೇಶ್ ತಮ್ಮ ಕಥೆಗಳ ನಿರ್ದಿಷ್ಟತೆ
ಬಗ್ಗೆ ಹೇಳಿದ್ದಾರೆ.
ಆದರೆ ಮುಂದಿನ ಚಿತ್ರ `ದೋರ್
ಗೆ ನಾನು ಸ್ವಂತ ಕಥೆ ಬರೆದಿಲ್ಲಾ. ದಕ್ಷಿಣ ಭಾರತದ
ಚಿತ್ರವೊಂದರಿಂದ ಪ್ರಭಾವಿತನಾಗಿ ಇದನ್ನು ರೂಪಿಸಿದ್ದೇನೆ. ಕೇರಳದ
ಇಬ್ಬರು ಹೆಂಗಸರ ನಿಜ ಜೀವನದ ಕಥೆಯಾಗಿದೆ. ರಾಜಸ್ಥಾನದ
ಸುಡುಬಿಸಿಲಿನಲ್ಲಿ ಶೂಟಿಂಗ್ ಮಾಡಿ ನಂತರ ಹಿಮಾಚಲದ ಕೊರೆಯುವ
ಚಳಿಯಲ್ಲಿ ಶೂಟಿಂಗ್ ಮಾಡಿದ್ದು ನಿಜಕ್ಕೂ ರೋಮಾಂಚನಕಾರಿಯಾಗಿತ್ತು
ಎಂದು ನಾಗೇಶ್ ಹೇಳಿದ್ದಾರೆ.
ಇನ್ನಷ್ಟು
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು