Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಟಿಸಿಎಸ್ `ವಿಶೇಷ ಆರ್ಥಿಕ ವಲಯಕ್ಕೆ ಸರ್ಕಾರ ಅಸ್ತು

ರಾಜ್ಯದಲ್ಲಿ ಹೊಸ ಯೋಜನೆಗಳು ಸಾಲು ಸಾಲು

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಸಂಸ್ಥೆಯು ಸರ್ಕಾರದ ಜೊತೆಗೆ ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ `ವಿಶೇಷ ಆರ್ಥಿಕ ವಲಯಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ರಾಜ್ಯದ ನಾಲ್ಕು ಭಾಗಗಳನ್ನು ವಿಶೇಷ ಆರ್ಥಿಕ ವಲಯವೆಂದು ಗುರುತಿಸಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಬೇಕಾದ ೧,೧೫೦ ಕೋಟಿ ಮೊತ್ತವನ್ನು ಟಿಸಿಎಸ್ ಸಂಸ್ಥೆ ಹಾಗೂ ಸರ್ಕಾರ ಜಂಟಿಯಾಗಿ ಭರಿಸುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು ಸಮೀಪದ ದೇವನಹಳ್ಳಿ (೧೦೦ ಎಕರೆ, ೫೦೦ಕೋಟಿ), ಮೈಸೂರು(೫೦ ಎಕರೆ, ೪೧೦ಕೋಟಿ), ಹುಬ್ಬಳ್ಳಿ-ಧಾರವಾಡ(೫೦ ಎಕರೆ, ೧೨೦ಕೋಟಿ) ಮತ್ತು ಮಂಗಳೂರು (೫೦ ಎಕರೆ, ೧೨೦ಕೋಟಿ) ಟಿಸಿಎಸ್ ಸಂಸ್ಥೆ ಗುರುತಿಸಿರುವ ವಲಯಗಳಾಗಿವೆ.

ದೇವನಹಳ್ಳಿ ಬಳಿಯ ೫,೭೭೯ಕೋಟಿ ವೆಚ್ಚದಲ್ಲಿ ೧,೪೫೦ ಎಕರೆ ಪ್ರದೇಶದಲ್ಲಿ ಹಾರ್ಡ್‌ವೇರ್ ಉದ್ಯಾನ ನಿರ್ಮಿಸಲು ಷಹಾಪೂರಜಿ ಪಾಲ್ಲೊಂಜಿ ಸಂಸ್ಥೆ ನೀಡಿದ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ಇದೇ ರೀತಿಯಲ್ಲಿ ಇಟ್ಟಿನ ಸಂಸ್ಥೆ ೫೩೪.೫೮ ಕೋಟಿ ವೆಚ್ಚದಲ್ಲಿ ಹೊಸಕೋಟೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಾಫ್ಟ್ ವೇರ್, ಹಾರ್ಡ್‌ವೇರ್ ಹೊರಗುತ್ತಿಗೆ ವಲಯಕ್ಕೂ ಸರ್ಕಾರ ಹಸಿರು ನಿಶಾನೆ ನೀಡಿದೆ.

ಉಡುಪಿ ಬಳಿ ಸುಜ್ಲಾನ್ ಸಂಸ್ಥೆ ೨೪೬.೮ ಕೋಟಿ ಹಣ ಹೂಡಿ ಅತ್ಯಾಧುನಿಕ ಇಂಜಿನಿಯರಿಂಗ್ ಕಾರ್ಖಾನೆಗಳನ್ನು ನಿರ್ಮಿಸಲೂ ಕೂಡ ಸರ್ಕಾರ ಅಸ್ತು ಎಂದಿದೆ.

ಇನ್ನಷ್ಟು

ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಗಣನೀಯ ಹೆಚ್ಚಳ

೨೫೦ ಕೋಟಿ ರೂಪಾಯಿ ರಾಜ್ಯಕ್ಕೆ ಬರ ನೆರವು

ಲಷ್ಕರ್ ಸ್ಥಾಪಕ ಹಫೀಝ್ ಮತ್ತೆ ಬಂಧನ

ಸರಳ ರೀತಿಯಲ್ಲಿ ರಾಹುಲ್ ಮಹಾಜನ್ ವಿವಾಹ

ಮುಂದಿನ ವರ್ಷ ನಕ್ಸಲ್ ವಿರೋಧಿ ದಳ ರೆಡಿ

ಕೇರಳ: ಹೆಚ್ಚು ವೇತನ ಆಗ್ರಹಿಸಿ ವೈದ್ಯರ ಮುಷ್ಕರ

ಶ್ರೀರಂಗಪಟ್ಟಣ-ಮೈಸೂರು ಷಟ್ಪಥ ರಸ್ತೆಗೆ ಚಾಲನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com