ಗಂಗೂಬಾಯಿ ಹಾನಗಲ್ ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ: ಹಿಂದೂಸ್ಥಾನ ಗಾಯನದಲ್ಲಿ
ಖ್ಯಾತರಾದ ಗಂಗೂಬಾಯಿ ಹಾನಗಲ್ ಎರಡು ದಿನದಿಂದ ಅಸ್ವಸ್ಥರಾಗಿದ್ದು
ಅವರನ್ನು ಸ್ಥಳೀಯ ಆಸ್ಪತ್ರೆಗೆ ಭಾನುವಾರ ಸೇರಿಸಲಾಯಿತು.
ಆಹಾರ ಸೇವಿಸದೆ ಬಹಳ ಕೃಶರಾಗಿದ್ದ
ಗಂಗೂಬಾಯಿಯವರ ದೇಹಾರೋಗ್ಯ ಸುಧಾರಣೆಗಾಗಿ ವೈದ್ಯರ ಸಲಹೆ
ಮೇರೆಗೆ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕುಟುಂಬದವರು
ತಿಳಿಸಿದ್ದಾರೆ.
`ಈಗಾಗಲೇ ರಕ್ತಹೀನತೆಯಿಂದ ಬಳಲುತ್ತಿದ್ದ
ಗಾಯಕಿಗೆ ಅಗತ್ಯ ಪ್ರಮಾಣದ ರಕ್ತ ನೀಡಲಾಗಿದೆ. ಚಿಕಿತ್ಸೆಗೆ
ಗಂಗೂಬಾಯಿಯವರು ಸ್ಪಂದಿಸುತ್ತಿದ್ದಾರೆ.