Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಕನ್ನಡಾಸಕ್ತರಿಗಾಗಿ ಹೊಸ ಅಂಗಡಿ ಟೋಟಲ್‌ಕನ್ನಡ.ಕಾಂ

`ಕನ್ನಡಿಗರ ಅಂತರಾಳದಲ್ಲಿ ಕನ್ನಡ ಇದ್ದೇ ಇರುತ್ತದೆ'


     ಬೆಂಗಳೂರು ಮಹಾನಗರದಲ್ಲಿ ಕನ್ನಡ ಎಲ್ಲಿದೇರಿ ಎನ್ನುವ ಉಡಾಫೆ ಮಾತುಗಳು ಕೇಳಿ ಬರುವ ಹೊತ್ತಿಗೇ ಇಲ್ಲೊಂದು ಕನ್ನಡದ ಚಿಗುರು ಹುಟ್ಟಿಕೊಂಡಿದೆ. ಅದೇ ಟೋಟಲ್ ಕನ್ನಡ.ಕಾಂ ಎಂಬ ಮಳಿಗೆ.


     ಇದು ಪುಸ್ತಕದ ಮಳಿಗೆಯೂ ಹೌದು. ಕ್ಯಾಸೆಟ್ ಮತ್ತು ಸಿಡಿಗಳು ಲಭ್ಯವಿರುವ ಅಂಗಡಿಯೂ ಹೌದು. ಟೋಟಲ್ ಕನ್ನಡ.ಕಾಂನಲ್ಲಿ ಎಲ್ಲ ರೀತಿಯ ಪುಸ್ತಕಗಳನ್ನು ಕನ್ನಡಾಸಕ್ತರಿಗೆ ಒದಗಿಸುವ ಉದ್ದೇಶ ಅಂಗಡಿಯ ಮಾಲಿಕ ಸೋಮಶೇಖರ್ ಅವರದು. ಕನ್ನಡ ಚಿತ್ರಗೀತೆಗಳು, ಸಾಹಿತ್ಯಿಕ ಪುಸ್ತಕಗಳು, ಅಡುಗೆ, ರಂಗಭೂಮಿ, ಕನ್ನಡ ಸಾಹಿತ್ಯ... ಹೀಗೆ ಕನ್ನಡದ ಎಲ್ಲ ಕ್ಷೇತ್ರಗಳ ಕುರಿತಾದ ಪುಸ್ತಕಗಳು ಇಲ್ಲಿ ಲಭ್ಯವಿರುತ್ತದೆ ಎಂದು ಸೋಮಶೇಖರ ಹೇಳುತ್ತಾರೆ.


ಜಯಂತ ಕಾಯ್ಕಿಣಿ:
      ಕನ್ನಡ ಮರೆಯಾಗುತ್ತಿದೆ ಎಂದು ಎಷ್ಟೇ ಹೇಳಿಕೊಂಡರೂ ನಮ್ಮ ಮನೆಯಲ್ಲಿ ಅಡುಗೆ ಮನೆಯೊಂದು ಇದ್ದಂತೆ ನಮ್ಮ ಮನಸ್ಸಿನ ಅಂತರಾಳದಲ್ಲಿ ಕನ್ನಡ ಎಂಬುದು ಎಂದೂ ಮನೆ ಮಾಡಿರುತ್ತದೆ. ಕನ್ನಡದ ತುಡಿತ ಇಂದಿನ ಯುವಕರಲ್ಲಿಯೂ ಇದೆ ಎಂಬುದಕ್ಕೆ ಈ ಟೋಟಲ್ ಕನ್ನಡ.ಕಾಂ ಸಾಕ್ಷಿ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಡುತ್ತಾರೆ. ಈ ಮಳಿಗೆಯನ್ನು ಆರಂಭಿಸಿರುವ ಸೋಮಶೇಖರ ಮತ್ತು ಲಕ್ಷ್ಮೀಕಾಂತ್ ಎಂಬ ಯುವಕರ ಪ್ರಯತ್ನವನ್ನು ಜಯಂತ್ ಕಾಯ್ಕಿಣಿ ಶ್ಲಾಘಿಸಿದ್ದಾರೆ.


       ಈ ಹಿಂದೆ ಟೋಟಲ್ ಕನ್ನಡ.ಕಾಂ ಎಂಬ ವೆಬ್‌ಸೈಟ್‌ನ್ನು ಅರಂಭಿಸಲಾಯಿತು. ಆದರೆ ಬರೆಯ ವೆಬ್‌ಸೈಟ್ ಇದ್ದರೆ ಸಾಕಾಗಲ್ಲ...ಕನ್ನಡದ ಅಂಗಡಿಯೊಂದಿದ್ದರೆ ಚೆನ್ನ ಎಂಬ ಆಶಯದೊಂದಿಗೆ ಈ ಯುವಕರಿಬ್ಬರು ಟೋಟಲ್ ಕನ್ನಡ.ಕಾಂ ಎಂಬ ಮಳಿಗೆಯನ್ನು ಆರಂಭಿಸಿದ್ದಾರೆ.


ಅವರ ಕನಸಿನ ಕೂಸಾದ ಈ ಮಳಿಗೆಗೆ ನೀವೂ ಒಮ್ಮೆ ಭೇಟಿ ಕೊಡಿ-

ವಿಳಾಸ:

ನಂ.೪, ಕೆಳಗಿನ ಅಂತಸ್ತು,

೩೩ ನೇ ಅಡ್ಡರಸ್ತೆ, ೧೧ ನೇ ಮುಖ್ಯರಸ್ತೆ,

ಲಕ್ಷ್ಮಿ ವೆಂಕಟೇಶ್ವರ ಆರ್ಕೇಡ್,

ಜಯನಗರ ೪ ನೇ ಬ್ಲಾಕ್,

ಬೆಂಗಳೂರು -೧೧,

ದೂರವಾಣಿ: 9448884373, 080-41460325

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com