|
ಸ್ವತಂತ್ರ
ದಿನ ಬಾಂಬ್ ಸ್ಫೋಟಕ್ಕೆ ಲಷ್ಕರೆ ಸಂಚು
ಉಗ್ರರ ಸಂಚು ಬೇಧಿಸಿದ ಭದ್ರತಾ ಪಡೆ
ಜಮ್ಮು : ಮುಂಬಯಿ ಸ್ಫೋಟದ ನಂತರ ಹಲವು ಹುಸಿ ಬಾಂಬ್
ಬೆದರಿಕೆಗಳಿಂದಾಗಿ ಜನರಲ್ಲಿ ಆತಂಕ ಮನೆಮಾಡಿರುವಾಗಲೇ ಆಗಸ್ಟ್ ೧೫ರಂದು ದೇಶದ ಹಲವೆಡೆ
ಬಾಂಬ್‌ಸ್ಫೋಟ ಮಾಡ ವುದಾಗಿ
ಲಷ್ಕರೆ ತೊಯ್ಯಬಾ ಉಗ್ರರು ಬೆದರಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ದೇಶದ ಯಾವ ಕಡೆಗಳಲ್ಲಿ ದಾಳಿ ನಡೆಸಬೇಕು
ಎಂಬ ಬಗ್ಗೆ ಲಷ್ಕರೆಯ ಒಂದು ಗುಂಪು ರೂಪು ರೇಶೆ ನಿರ್ಮಿಸುತ್ತಿರುವುದು ಪೊಲೀಸ್
ಇಲಾಖೆ ಪತ್ತೆ ಮಾಡಿದೆ.
ಸ್ವಾತಂತ್ರ್ಯ ದಿನದಂದು ನಡೆಸಲಿರುವ ದಾಳಿಗೆ ಪೂರ್ವ ತಯಾರಿಯಾಗಿ ಜುಲೈ
೩೦ರಂದು ಉಗ್ರರು ಮಹಮದ್ ಶರೀಫ್ ಎಂಬಾತನನ್ನು ಅಪಹರಿಸಿದ್ದರು. ಆತನಿಂದ ಭಾರತದ
ನಗರಗಳ ಬಗ್ಗೆ, ದಾರಿಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಆದರೆ ಶರೀಫ್
ಉಗ್ರರಿಂದ ತಪ್ಪಿಸಿಕೊಂಡು, ಭದ್ರತಾ ಪೊಲೀಸ್ ಪಡೆಯನ್ನು ಸಂಪರ್ಕಿಸಿ ಉಗ್ರರ
ಕಾರ್‍ಯಾಚರಣೆಯ ಮಾಹಿತಿಯನ್ನು ತಿಳಿಸಿದ್ದಾನೆ. |