|
`ಭ್ರಷ್ಟಾಚಾರವನ್ನು ಸಾರ್ವಜನಿಕರೂ ವಿರೋಧಿಸಬೇಕು'
ಎನ್. ಬಿ. ಹೊಂಬಾಳ್
ಬೆಂಗಳೂರು:
ರಾಜ್ಯದ ನೂತನ ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ಗುರುವಾರ(ಆ. ೩) ಪ್ರಮಾಣ ವಚನ
ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ವಿಕ್ರಾಂತ
ಕರ್ನಾಟಕ.ಕಾಂ ಸಂತೋಷ್ ಹೆಗಡೆಯವರನ್ನು ಮಾತನಾಡಿಸಿದಾಗ ಅವರು ತಮ್ಮ ಮುಂದಿನ
ಕಾರ್‍ಯಯೋಜನೆಯನ್ನು ವಿವರಿಸಿದರು.

ಭ್ರಷ್ಟಾಚಾರದ
ವಿರುದ್ಧ ಸಾರ್ವಜನಿಕರನ್ನು ಜಾಗೃತಗೊಳಿಸುವಂತೆ ಮಾಡುವುದು ತಮ್ಮ ಗುರಿ.
ಯುವಕರಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ
ಕಾಲೇಜು ಮತ್ತು ಶಾಲೆಯಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸುವುದು.
ತಮ್ಮ ಕಚೇರಿ ಬಿಟ್ಟು ವಿವಿಧ ಕಚೇರಿಗಳಿಗೆ ದಾಳಿ ನಡೆಸುವುದಿಲ್ಲ. ಬದಲಾಗಿ ಲೋಕಾಯುಕ್ತದ
ಇತರ ಸಿಬ್ಬಂದಿಯೇ ದಾಳಿ ನಡೆಸುತ್ತಾರೆ.
ತಮ್ಮ ಕೆಲಸ ಏನಿದ್ದರೂ ಭ್ರಷ್ಟಾಚಾರದ ವಿರುದ್ಧ ಯೋಜನೆ ರೂಪಿಸುವುದು, ಅದನ್ನು
ಕಾರ್‍ಯರೂಪಕ್ಕೆ ತರುವುದು ನಮ್ಮ ಸೈನಿಕರು ಅಂದರೆ ಲೋಕಾಯುಕ್ತ ಸಿಬ್ಬಂದಿ
ರಾಜ್ಯಪಾಲ ಟಿ. ಎನ್.
ಚತುರ್ವೇದಿ ನೂತನ ಲೋಕಾಯುಕ್ತರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಮತ್ತಿತರ ಸಚಿವರು ಉಪಸ್ಥಿತರಿದ್ದರು.

ನಿವೃತ್ತ ಲೋಕಾಯುಕ್ತ
ಎನ್. ವೆಂಕಟಾಚಲಯ್ಯ ನೂತನ ಲೋಕಾಯುಕ್ತರನ್ನು ಅಭಿನಂದಿಸಿ ಅಗತ್ಯವಿರುವ ಎಲ್ಲ
ಸಹಾಯವನ್ನೂ ನೀಡುವುದಾಗಿ ಹೇಳಿದರು.
ಇದೇ ವೇಳೆಯಲ್ಲಿ ಮಾತನಾಡಿದ
ಕುಮಾರಸ್ವಾಮಿ, ಲೋಕಾಯುಕ್ತರಿಗೆ ಅಗತ್ಯವಿರುವ ಎಲ್ಲ ಅಧಿಕಾರವನ್ನು ನೀಡುವುದಾಗಿ
ಭರವಸೆ ನೀಡಿದರು.
|