|
ನೆಹರು
ತಾರಾಲಯಕ್ಕೆ ಸುಧಾಮೂರ್ತಿ ನೆರವು
ಬೆಂಗಳೂರು :
ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ನೆಹರೂ ತಾರಾಲಯ ಮಕ್ಕಳಿಗೆ ಮೆಚ್ಚಿನ
ಸ್ಥಳವಾಗಿದ್ದರೂ ಅಲ್ಲಿ ಆಧುನಿಕ ತಂತ್ರಜ್ಞಾನದ ಕೊರತೆಯಿಂದಾಗಿ ಬರೀ ಆಕಾಶ, ಹಕ್ಕಿ
ಪಕ್ಕಿಗಳ ಚಿತ್ರವನ್ನು ಕಾಣ ಬೇಕಾಗಿದೆ.

ಆದರೆ ಇನ್ನು ಮುಂದೆ ಹೀಗಾಗುವುದಿಲ್ಲ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ನೆಹರು ತಾರಾಲಯಕ್ಕೆ ನೆರವು ನೀಡುವುದಾಗಿ
ಘೋಷಿಸಿದ್ದಾರೆ. ಅವರು ಇತ್ತೀಚೆಗೆ ನೆಹರು ತಾರಾಲಯದಲ್ಲಿ ಆಲ್ಬರ್ಟ್ ಐನ್‌ಸ್ಟಿನ್ ಸ್ಮರಣೆ
ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ
ನಿಮಿತ್ತ ನೆಹರು ತಾರಾಲಯ ನಿರ್ಮಿಸಿದ ೪೩ ನಿಮಿಷ ಅವಧಿಯ ಬಾಹ್ಯಾಕಾಶ ವಿಜ್ಞಾನ ಸಾಕ್ಷ್ಯ
ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನೆಹರು ತಾರಾಲಯಕ್ಕೆ ಸದ್ಯವೇ
ಇನ್ಫೋಸಿಸ್ ಪ್ರತಿಷ್ಠಾನ ಹಣಕಾಸಿನ ಬೆಂಬಲ ನೀಡಲಿದೆ ಎಂದು ಸುಧಾಮೂರ್ತಿ ಭರವಸೆ ನೀಡಿದ್ದಾರೆ.
|