|
ಸರ್ಕಾರದಿಂದ ಹೆಣ್ಮಕ್ಕಳಿಗೆ ಭಾಗ್ಯದ ಲಕ್ಷ್ಮಿಯೋಜನೆ
ಬೆಂಗಳೂರು: ಬಾಗ್ಯದ
ಲಕ್ಷ್ಮಿ ಬಾರಮ್ಮ ಯೋಜನೆಯನ್ನು ಅಗಸ್ಟ್ ೧೫ ರಂದು ಆರಂಭಿಸಲಾಗುವುದು ಹಾಗೂ ಈ
ಬಗ್ಗೆ ಸರ್ಕಾರದಿಂದ ಆದೇಶ ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಸಮಾಜ ಕಲ್ಯಾಣ
ಸಚಿವ ಹೆಚ್. ಕೆ. ಕುಮಾರಸ್ವಾಮಿ ಹೇಳಿದ್ದಾರೆ.

ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಸಹಾಯ ನೀಡುವ ಸಲುವಾಗಿ ಈ ಯೋಜನೆ ರೂಪಿಸಲಾಗಿದ್ದು,
ಮಗುವಿನ ಹೆಸರಿನಲ್ಲಿ ೧೦,೦೦೦ ರೂ ಗಳ ನಿರ್ಧಿಷ್ಟ ಠೇವಣಿ ಇಡಲಾಗುವುದು. ೧೮ ವರ್ಷ
ತುಂಬುವ ಹೊತ್ತಿಗೆ ಈ ಹಣವನ್ನು ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.
ದೈಹಿಕವಾಗಿ ಅಂಗವಿಕಲಕರಾದ ಮಹಿಳೆಯರ ಸಹಾಯಕ್ಕಾಗಿ ಸ್ವಯಂ ಸಹಾಯ
ಸಂಘಗಳನ್ನು ಪ್ರಾರಂಭಿಸಲಾಗುವುದು ಈ ಬಗ್ಗೆ ಆರ್ಥಿಕ ಸಮಿತಿಯಲ್ಲಿ ಚರ್ಚೆ ನಡೆದಿದ್ದು
೧೦ ಕೋಟಿ ರೂಗಳು
ಮಂಜೂರಾಗುವ ನಿರೀಕ್ಷೆಯಿದೆ ಎಂದರು. |