|
ಟೀವಿ ಜಾಹೀರಾತು
ಕಡಿವಾಣಕ್ಕೆ ಕೇಂದ್ರ ಕ್ರಮ
ಗಂಟೆಗೆ ೧೨ ನಿಮಿಷ ಮಾತ್ರ
ಜಾಹೀರಾತು
ನವದೆಹಲಿ : ಪದೇ ಪದೇ ಜಾಹೀರಾತು ಬಿತ್ತರಿಸುವ ಟಿವಿ ಚಾನಲ್‌ಗಳು ಕೇಂದ್ರ ಸರ್ಕಾರದ
ಕೆಂಗಣ್ಣಿಗೆ ಗುರಿಯಾಗಿದ್ದು, ಇನ್ನು ಮುಂದೆ ಗಂಟೆಗೆ ಕೇವಲ ೧೨ ನಿಮಿಷ ಮಾತ್ರ
ಜಾಹೀರಾತು ಪ್ರಸಾರ ಮಾಡುವಂತೆ ಟಿವಿ ಪ್ರಸಾರ ಸಂಸ್ಥೆಗಳಿಗೆ ಸ್ಪಷ್ಟ ಆದೇಶ ನೀಡಿದೆ.
ಅದಲ್ಲದೇ ಪೇಚಾನಲ್‌ಗಳು ಗ್ರಾಹಕರಿಂದ ಹೆಚ್ಚು ದುಡ್ಡು ವಸೂಲು ಮಾಡುವಂತಿಲ್ಲ.
ಒಂದು ವೇಳೆ ಹೆಚ್ಚು ದುಡ್ಡು ವಸೂಲು ಮಾಡಿದರೆ ಅಂತಹ ಪೇ ಚಾನಲ್‌ಗಳ ವಿರುದ್ಧ
ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ
ಪ್ರಾಧಿಕಾರಕ್ಕೆ ನೀಡಲಾಗಿದೆ.

ಪೇ ಚಾನಲ್‌ಗಳು ತನ್ನ ಗ್ರಾಹಕರಿಂದ ಹೆಚ್ಚಿನ ಹಣವನ್ನು ವಸೂಲು ಮಾಡಿದರೆ, ಪ್ರಾಧಿಕಾರ
ಮಧ್ಯೆ ಪ್ರವೇಶಿಸಿ ಗ್ರಾಹಕರಿಂದ ಎಷ್ಟು ಹಣ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸಲಿದೆ.
|