ಖ್ಯಾತ ನಿರ್ದೇಶಕ ಹೃಷಿಕೇಶ್ ಮುಖರ್ಜಿ ನಿಧನ
ಮುಂಬಯಿ: ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ
ಪುರಸ್ಕೃತ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಭಾನುವಾರ ಮುಂಬಯಿಯಲ್ಲಿ
ನಿಧನರಾದರು. ಅವರು ದೀರ್ಘಕಾಲದಿಂದ ಮೂತ್ರಪಿಂಡ ವೈಫಲ್ಯ ಹಾಗೂ
ನ್ಯುಮೋನಿಯಾ ಕಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರಿಗೆ ೮೪ ವರ್ಷ ವಯಸ್ಸಾಗಿತ್ತು.

೧೯೫೧ ರಲ್ಲಿ ಹಿಂದಿ ಚಿತ್ರರಂಗಕ್ಕೆ ಬಂದ ಹೃಷಿಕೇಶ್
ಮುಖರ್ಜಿ, ೧೯೫೭ ರಲ್ಲಿ `ಮುಸಾಫಿರ್' ಚಿತ್ರವನ್ನು ಮೂಲಕ ಸ್ವತಂತ್ರ
ನಿರ್ದೇಶಕರಾದರು.
ಆನಂದ್, ಅಭಿಮಾನ್, ಚುಪ್ಕೆ ಚುಪ್ಕೆ,
ಖೂಬ್‌ಸೂರತ್, ಗುಡ್ಡಿ ಮುಂತಾದ ಯಶಸ್ವಿ ಮೌಲ್ಯಯುತ
ಚಿತ್ರಗಳನ್ನು ನೀಡಿದ ಕೀರ್ತಿ ಮುಖರ್ಜಿಯವರಿಗೆ ಸಲ್ಲುತ್ತದೆ.