ಕನ್ನಡ ಸಮ್ಮೇಳನಕ್ಕೆ ಬರಲು ತಪ್ಪಿಸಿಕೊಂಡ ಮುಖ್ಯಮಂತ್ರಿ
ಬೆಂಗಳೂರು: ಸಪ್ಟೆಂಬರ್ ೧ ರಿಂದ ೩ ರ ತನಕ
ಅಮೇರಿಕದ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ನಾಲ್ಕನೆ ಅಂತರಾಷ್ಟ್ರೀಯ
ಕನ್ನಡ ಸಮ್ಮೇಳನಕ್ಕೆ ಕುಮಾರಸ್ವಾಮಿಯವರು ಹೋಗುವ ಸಂಭವ
ಕಡಿಮೆಯಾಗಿದೆ.
ರಾಜ್ಯದಲ್ಲಿ ಹೆಚ್ಚಾದ ಪ್ರವಾಹದ ಹಿನ್ನೆಲೆಯಲ್ಲಿ
ಈ ಪ್ರವಾಸ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆಯಾದರೂ, ಸರ್ಕಾರದ
ಈ ಸಂಕಷ್ಟದ ಸಮಯದಲ್ಲಿ ಹೋಗಬಾರದೆಂದು ತಂದೆಯಿಂದ ಬಂದ
ಸಲಹೆಯಿಂದ ಪ್ರವಾಸ ರದ್ದು ಮಾಡಿದ್ದಾರೆಂದು ಸರ್ಕಾರೇತರ
ಮೂಲಗಳು ತಿಳಿಸಿವೆ.