Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ಛತ್ತೀಸ್‌ಘಡದಲ್ಲಿ ವಂದೇಮಾತರಂ ಹಾಡುವುದು ಕಡ್ಡಾಯ

ಮದರಸಾ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ರೂಲ್ಸು ಅನ್ವಯಿಸುತ್ತದೆ

ರಾಯ್‌ಪುರ : ವಂದೇ ಮಾತರಂ ಕುರಿತ ವಿವಾದಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಛತ್ತೀಸ್‌ಘಡದ ಬಿಜೆಪಿ ಸರಕಾರ ಮದರಸಾಗಳೂ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದೆ.

ಸೆಪ್ಟೆಂಬರ್ ೭ರಿಂದ ವಂದೇ ಮಾತರಂ ಹಾಡುವುದು ಕಡ್ಡಾಯವಾಗಲಿದೆ ಎಂದು ರಾಜ್ಯದ ಶಾಲಾಶಿಕ್ಷಣ ಕಾರ್‍ಯದರ್ಶಿ ಚಿತ್ತರಂಜನ್ ಖೇತನ್ ಹೇಳಿದ್ದಾರೆ.

ಮದರಸಾ ಮಂಡಳಿ, ಸಂಸ್ಕೃತ ಮಂಡಳಿ ಮತ್ತು ಮಾಧ್ಯಮಿಕ ಶಿಕ್ಷಣ ಮಂಡಳಿ, ಸಾರ್ವಜನಿಕ ಶಿಕ್ಷಣ ನಿರ್ದೇಶಕರು, ರಾಜೀವ್‌ಗಾಂಧಿ ಶಿಕ್ಷಾ ಸಂಸ್ಥೆ ಅಲ್ಲದೆ ರಾಜ್ಯ ಎನ್‌ಸಿಇಆರ್‌ಟಿ ಗೂ ಕಡ್ಡಾಯವಾಗಿ ವಂದೇ ಮಾತರಂ ಹಾಡುವಂತೆ ಸೂಚಿಸಲಾಗಿದೆ.

ರಾಷ್ಟ್ರಗೀತೆಯಾಗಿ ವಂದೇ ಮಾತರಂ ಹಾಡು ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ವಂದೇ ಮಾತರಂ ಹಾಡುವುದನ್ನು ಕೇಂದ್ರಸರಕಾರವು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಆದ್ದರಿಂದ ಛತ್ತೀಸ್‌ಘಡದಲ್ಲಿ ಬೆಳಗ್ಗೆ ೧೧ಗಂಟೆಗೆ ಮುಂಚೆ ವಂದೇ ಮಾತರಂ ಹಾಡುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಚಿತ್ತರಂಜನ್ ಖೇತನ್ ಹೇಳಿದ್ದಾರೆ.

 

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com