ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿದ ಸದಸ್ಯರ ಅಮಾನತು
ಹೈದರಾಬಾದ್ : ತೆಲಂಗಾಣವನ್ನು ಪ್ರತ್ಯೇಕ
ರಾಜ್ಯವಾಗಿ ಘೋಷಿಸಬೇಕು ಎಂಬ ಹೆಚ್ಚುತ್ತಿರುವ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿರುವ
೧೭ ಮಂದಿ ತೆಲಂಗಾಣ ರಾಷ್ಟ್ರೀಯ ಸಮಿತಿಯ ಸದಸ್ಯರನ್ನು ರಾಜ್ಯ ಸಭೆಯಿಂದ
ಅಮಾನತುಗೊಳಿಸಲಾಗಿದೆ.
ರಾಜ್ಯಸಭೆಯ ಕಲಾಪಗಳನ್ನು ಮುಂದುವರೆಸಲು
ಅಡ್ಡಿಯುಂಟು ಮಾಡಿದ ತೆಲಂಗಾಣ ಸಮಿತಿ ಸದಸ್ಯರು ಜೈ ತೆಲಂಗಾಣ ಎಂಬ
ಘೋಷಣೆಯ್ನು ಕೂಗಿ ಪ್ರತ್ಯೇಕ ರಾಜ್ಯ ನಿರ್ಮಾಣ ಕುರಿತ ಚರ್ಚೆಯನ್ನು
ಆರಂಭಿಸುವಂತೆ ಆಗ್ರಹಿಸಿದರು.