ಪ್ರಧಾನಿ ಕಾರ್ಯಕ್ರಮಕ್ಕೆ ಮಳೆಯ ಅಡ್ಡಿ
ಭುವನೇಶ್ವರ: ಎರಡು ದಿನ ಒರಿಸ್ಸಾದ ಪ್ರವಾಸದಲ್ಲಿರುವ
ಪ್ರಧಾನಿ ಮನ ಮೋಹನ ಸಿಂಗ್ ಕಾರ್ಯಕ್ರಮಕ್ಕೆ ಮಳೆಯು
ತೊಂದರೆಯನ್ನು ತಂದಿದೆ. ಮಳೆಯ ಕಾರಣ ಅಂಗುಲ್‌ನ ಕನಿಹದಲ್ಲಿನ
ಅಣು ಉಷ್ಣ ಸ್ಥಾವರ ಘಟಕಕ್ಕೆ ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಮುಂಜಾನೆ ೧೦:೪೫ ರ ಸುಮಾರಿಗೆ ಇಲ್ಲಿನ ಬಿಜೂ
ಪಟ್ನಾಯಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯನ್ನು ಮಳೆಯು
ಸ್ವಾಗತಿಸಿತು.
ಐಎಅಫ್ ಹೆಲಿಕಾಪ್ಟರ್ ನಿಂದ ಕನಿಹಗೆ ಹೋಗಬೇಕಾಗಿದ್ದ
ಪ್ರಧಾನಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ನಿಲ್ದಾಣದಲ್ಲೇ ಒಂದು
ಗಂಟೆಗೂ ಅಧಿಕ ಕಾಲ ಕಾಯಬೇಕಾಯಿತು.
ಅಲ್ಲಿಂದ ನೇರ ರಾಜಭವನಕ್ಕೆ ತೆರಳಿದ ಪ್ರಧಾನಿ
ತೆರಳಿದರು. ಹವಾಮಾನ ಸರಿಯಾಗುವವರೆಗೂ ಮುಂದಿನ
ಕಾರ್ಯಕ್ರಮಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನಿಗಳ
ಆಪ್ತ ಕಾರ್ಯದರ್ಶಿ ಹೇಳಿದ್ದಾರೆ.