|
ಅ.
೨: ಬೆಳಗಾವಿಯಲ್ಲಿ ಕನ್ನಡ ಜಾಥಾ ಆರಂಭ
೪೮ ತಾಲ್ಲೂಕುಗಳಲ್ಲಿ ಸಂಚರಿಸಲಿರುವ ಕನ್ನಡ ಜಾಥಾ
ಬೆಳಗಾವಿ: ಅಕ್ಟೋಬರ್ ೨ರಂದು
ಬೆಳಗಾವಿಯಿಂದ `ಕನ್ನಡ ಜಾಗೃತಿ ಜಾಥಾ
ಹೊರಡಲಿದೆ.
ಗಡಿನಾಡಿನ ೪೮ ತಾಲ್ಲೂಕುಗಳಲ್ಲಿ ಸಂಚರಿಸಲಿರುವ
ಈ ಜಾಥಾವು ಬೆಳಗಾವಿಯಲ್ಲಿ ಶುರುವಾಗಿ ಕಾರವಾರದಲ್ಲಿ ಅಕ್ಟೋಬರ್ ೨೩
ರಂದು ಮುಕ್ತಾಯವಾಗಲಿದೆ.
ಕನ್ನಡ ಜಾಥಾ ಮುಗಿದ ನಂತರ ಸರ್ಕಾರಕ್ಕೆ
ವರದಿ ಸಲ್ಲಿಸಲಾಗುವುದು ಎಂದು ಜಾಥಾವನ್ನು ಸಂಯೋಜಿಸಿರುವ ವಿಧಾನಪರಿಷತ್ತಿನ
ಸದಸ್ಯ `ಮುಖ್ಯಮಂತ್ರಿ
ಚಂದ್ರು ಹೇಳಿದ್ದಾರೆ.
`ಕನ್ನಡ ಹಾಗೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ
ಮತ್ತು ಸತತವಾಗಿ ಸರ್ಕಾರಗಳು ಕನ್ನಡಿಗರ ಆದ್ಯತೆಯನ್ನು
ಈಡೇರಿಸುವಲ್ಲಿ ವಿಫಲವಾಗಿವೆ. ಪ್ರಾದೇಶಿಕ ಅಸಮಾನತೆ ಹಾಗೂ ಅನ್ಯಭಾಷಿಗರ
ದಾಳಿಯಿಂದ ರಾಜ್ಯದಲ್ಲಿ ನಾನಾ ಸಮಸ್ಯೆಗಳು ಉದ್ಭವಿಸುತ್ತಿದೆ. ಈ ನಿಟ್ಟಿನಲ್ಲಿ
ಕನ್ನಡವನ್ನು ಶಿಕ್ಷಣ, ಆಡಳಿತ, ಔದ್ಯೋಗಿಕ ರಂಗದಲ್ಲಿ ಅಳವಡಿಸಲು
ಜಾಥಾವನ್ನು ಕೈಗೊಳ್ಳಬೇಕಾಯಿತು
ಎಂದು ಮಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ನಟ,
ನಟಿಯರು ಸ್ಥಳೀಯ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರು
ಭಾಗವಹಿಸಲಿದ್ದಾರೆ.
|