: ಹುಬ್ಬಳ್ಳಿ-
ಧಾರವಾಡದಲ್ಲಿ ಐಐಟಿಯನ್ನು ಸ್ಥಾಪಿಸುವಂತೆ ಮಾನವ ಸಂಪನ್ಮೂಲ
ಅಭಿವೃದ್ಧಿ ಇಲಾಖೆಯ ಮಾಜಿ ಮಂತ್ರಿ ಎಸ್. ಎರ್.ಬೊಮ್ಮಾಯಿ ಪ್ರಧಾನಿಯನ್ನು
ಕೋರಿದ್ದಾರೆ.
ಪ್ರಧಾನಿ ಮನಮೋಹನಸಿಂಗ್‌ಗೆ ಬರೆದಿರುವ ಪತ್ರದಲ್ಲಿ
ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಈ ನಿಟ್ಟಿನಲ್ಲಿ ತಾವು ಮಾನವ ಸಂಪನ್ಮೂಲ
ಖಾತೆಯ ಮಂತ್ರಿಯಾಗಿದ್ದಾಗ ವಿಜ್ಞಾನಿ ಯು.ಆರ್. ರಾವ್ ನೇತೃತ್ವದ
ಸಮಿತಿಯನ್ನು ರಚಿಸಲಾಗಿತ್ತು. ಕರ್ನಾಟಕದ ಯಾವ ಪ್ರದೇಶದಲ್ಲಿ
ಐಐಟಿಯನ್ನು ಸ್ಥಾಪಿಸಬೇಕು ಎಂದು ಸಮಿತಿಯು ಪರಿಶೀಲನೆ ನಡೆಸಿ
೧೯೯೮ರಲ್ಲಿ ತನ್ನ ವರದಿಯನ್ನು ನೀಡಿತ್ತು. `ಸಮಿತಿಯ ವರದಿಯ ಪ್ರಕಾರ
ಹುಬ್ಬಳ್ಳಿ-ಧಾರವಾಡ ಪ್ರದೇಶವೇ ಐಐಟಿ ಸ್ಥಾಪಿಸಲು ಸೂಕ್ತ
ಸ್ಥಳವೆಂದು ಹೇಳಲಾಗಿತ್ತು. ಹುಬ್ಬಳ್ಳಿ-ಧಾರವಾಡದಿಂದ ಗೋವಾ ಹಾಗೂ
ಮಹಾರಾಷ್ಟ್ರದ ಸಮೀಪವಿದೆ. ಸುಮಾರು ೩೦೦ ಎಕರೆ ಪ್ರದೇಶವನ್ನು
ಪ್ರಸ್ತುತ ಯೋಜನೆಗೆ ನೀಡಲು ಗುರುತಿಸಲಾಗಿದೆ. ಐಐಟಿ ಸ್ಥಾಪಿಸುವುದಕ್ಕೆ
ಬೆಂಗಳೂರಿಗಿಂತ ಹುಬ್ಬಳ್ಳಿಯೇ ಸೂಕ್ತ