ದಿಲ್ಲಿಯಲ್ಲಿ ೨೦೦ಕೋ.ರೂಗಳ ರಾಸಾಯನಿಕ ಪತ್ತೆ
ದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ
೨೦೦ ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ರಾಸಾಯನಿಕ ವಸ್ತುಗಳನ್ನು
ದೆಹಲಿ ಪೊಲೀಸರು ಭಾನುವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ ಈ ವಸ್ತುಗಳನ್ನು
ಪತ್ತೆಹಚ್ಚಿರುವ ಪೊಲೀಸರು ಸಂಶಯಿತ ವ್ಯಕ್ತಿಯೊಬ್ಬನನ್ನು
ಬಂಧಿಸಿದ್ದಾರೆ. ಸುಮಾರು ೪,೪೦೦ ಕೆ.ಜಿ. ಮೆಥಕ್ವಲೋನ್ ಅಥವಾ ಸಾಮಾನ್ಯವಾಗಿ
ಮಾಂಡ್ರ್ಯಾಕ್ಸ್ ಎಂದು ಗುರುತಿಸಿಕೊಂಡಿರುವ ಈ ವಸ್ತು ಬದರ್‌ಪುರ ಪ್ರದೇಶದ
ಗೋಡೌನ್‌ನಲ್ಲಿ ಪತ್ತೆಯಾಗಿದ್ದು ಇದನ್ನು ಅಮೆರಿಕಾದ ಗಿರಾಕಿಯೊಬ್ಬನಿಗೆ
ಸಾಗಿಸುವ ಇರಾದೆಯಿತ್ತು.