ಗಡಿವಿವಾದ ಬಗೆಹರಿಸಲು ಸದ್ಯವೇ ಸರ್ವಪಕ್ಷ ಸಭೆ
ಮುಂಬಯಿ : ಮಹಾರಾಷ್ಟ್ರ ಮತ್ತು ಕರ್ನಾಟಕ
ಗಡಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಸದ್ಯವೇ ಸರ್ವಪಕ್ಷಗಳ
ಸಭೆ ಕರೆಯಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಮುಖ
ಕರಣ್ ಥಾಕುರ್ ಹೇಳಿದ್ದಾರೆ.
ಹಲವು ವರ್ಷಗಳಿಂದ ಬಗೆಹರಿಯದೇ ಉಳಿದಿರುವ
ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಇತ್ತೀಚೆಗೆ ಮುಖ್ಯಮಂತ್ರಿ ವಿಲಾಸ್
ರಾವ್ ದೇಶ್‌ಮುಖ್ ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಕಾನೂನಿನ
ಚೌಕಟ್ಟಿನಲ್ಲಿ ಬರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು
ಕರೆಯಲಾಗಿದೆ.
ಮರಾಠಿ ಮಾತನಾಡುವ ಜನಾಂಗಗಳಿರುವ
ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಸಮಿತಿ
ಹೋರಾಟ ನಡೆಸುತ್ತಿದೆ.