ಸುತ್ತೂರು ಮಠದಲ್ಲಿ ರಾಜೇಂದ್ರ ಸ್ವಾಮಿ
ಜಯಂತಿ
ಮೈಸೂರು: ಸುತ್ತೂರು ಮಠದ ಶ್ರೀ
ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ೯೧ ನೇ ಜಯಂತಿಯನ್ನು ಮೈಸೂರಿನಲ್ಲಿ
ವಿಜೃಂಭಣೆಯಿಂದ ಆಚರಿಸಲಾಯಿತು.
ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಮೂರ್ತಿಯನ್ನು
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರು
ಅನಾವರಣಗೊಳಿಸಿದರು. ಇದಕ್ಕೂ ಮುನ್ನ ರಾಜ್ಯಪಾಲ ಟಿ. ಎನ್.
ಚತುರ್ವೇದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
`ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರಕ್ಕೆ
ಅದರಲ್ಲೂ ಹೆಣ್ಣು ಮಕ್ಕಳು ಹಾಗೂ ಅಂಗವಿಕಲರ ಶಿಕ್ಷಣಕ್ಕೆ ಒತ್ತು ನೀಡಿದರು.
ಒಳ್ಳೆಯ ಸಮಾಜ ನಿರ್ಮಾಣಕ್ಕೆ ಸ್ವಾಮೀಜಿಯಂತಹ ಒಳ್ಳೆಯ
ವ್ಯಕ್ತಿಗಳು ಅವಶ್ಯ