ಎಸ್‌ಎಫ್‌ಐನಿಂದ ಕಾಲೇಜು ಬಂದ್, ಧರಣಿ
ಬೆಂಗಳೂರು: ಎಸ್‌ಎಫ್‌ಐ ಗುರುವಾರ
ರಾಜ್ಯಾದ್ಯಾಂತ ಕರೆದಿದ್ದ ಕಾಲೇಜಿನ ಬಂದ್‌ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ
ದೊರೆತಿದೆ.
ಶಾಲಾ ಕಾಲೇಜಿನ ನಾನಾ ಸಮಸ್ಯೆಗಳಿಗೆ ಪರಿಹಾರವನ್ನು
ಆಗ್ರಹಿಸಿ ನಗರದ ನಾನಾ ಕಾಲೇಜಿನ ವಿದ್ಯಾರ್ಥಿಗಳು ತರಗತಿಯನ್ನು
ಬಹಿಷ್ಕರಿಸಿದರು. ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.
ಸರ್ಕಾರಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜಿನ ಆಡಳಿತ ಸಂಸ್ಥೆಯ
ಎದುರು ಸರ್ಕಾರದ ಪ್ರತಿಕೃತಿಯನ್ನು ದಹಿಸಿದರು.
ದಾವಣಗೆರೆಯಲ್ಲಿಯೂ ಎಸ್‌ಎಫ್‌ಐ ಪ್ರತಿಭಟನೆ
ಯಶಸ್ವಿಯಾಗಿತ್ತು. ವಿದ್ಯಾರ್ಥಿ ಸಂಘ ಅನಂತ್ ನಾಯಕ್, ವಿನಾಯಕ್
ಪೂಜಾರ್, ಮಧುಚಂದ್ರ, ಪ್ರಕಾಶ್ ಮತ್ತಿತರರು ಧರಣಿಯ
ಮುಂದಾಳತ್ವವನ್ನು ವಹಿಸಿದ್ದರು.
ಜೊತೆಗೆ ಜಗಳೂರು, ಹರಪ್ಪನಹಳ್ಳಿ ಹಾಗೂ ಹರಿಹರದಲ್ಲೂ
ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿತ್ತು.