: ಕುಡಿಯುವ ನೀರಿನ
ಸಮಸ್ಯೆ ಎದುರಿಸುತ್ತಿರುವ ಹಾಗೂ ಮಳೆಯನ್ನು ಕಾಣದೆ ಬರ
ಎದುರಿಸುತ್ತಿರುವ ರಾಜ್ಯದ ೧೦೨ ತಾಲ್ಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ
ಎಂದು ಘೋಷಿಸಿದೆ.
ಈ ತಾಲ್ಲೂಕುಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು
ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿಯನ್ನು
ರಚಿಸಲಾಗಿದೆ. ೭೪ ತಾಲ್ಲೂಕುಗಳಲ್ಲಿ ಒಂದು ತಿಂಗಳಿಡೀ ಮಳೆಯಾಗಿಲ್ಲ.
ಕೇಂದ್ರ ಸರಕಾರದ ಸೂಚನೆಯಂತೆ ನಾಲ್ಕು ವಾರಕ್ಕಿಂತ ಹೆಚ್ಚು ಅವಧಿ
ಮಳೆಯಾಗದೇ ಇರುವ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ರಚಿಸಲಾಗಿರುವ ಸಂಪುಟ ಸಮಿತಿ ಪರಿಹಾರ ಕಾರ್‍ಯ
ಮತ್ತು ಸಂಬಂಧಪಟ್ಟ ಇಲಾಖೆಯಿಂದ ಸಂತ್ರಸ್ತರಿಗೆ ಹಣ ಒದಗಿಸುವ
ಕುರಿತು ಕಾರ್‍ಯಪ್ರವೃತ್ತವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ
ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಗುರುವಾರ ಸಂಪುಟ ಸಮಿತಿ ಸಭೆಯ
ನಂತರ ಸುದ್ದಿಗಾರರಿಗೆ ತಿಳಿಸಿದರು.