ಬೇಜಾರೇಕೆ...ಬಾಲಕರಿಗೂ ಸೈಕಲ್ ಕೊಡೋಣ
ಬೆಂಗಳೂರು : ಬಾಲಕಿಯರಿಗೆ ಬೈಸಿಕಲ್
ಕೊಡಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಮೇಲೆ ಬಾಲಕರು ಮುನಿಸಿಕೊಳ್ಳಬೇಕಿಲ್ಲ.
ಬಾಲಕರಿಗೆ ಮುಂದಿನ ವರ್ಷ ಬೈಸಿಕಲ್ ಕೊಡಿಸುವುದಾಗಿ
ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಸರಕಾರಕ್ಕೆ ಗ್ರಾಮೀಣ ಹೆಣ್ಣುಮಕ್ಕಳ
ಏಳಿಗೆಯ ಬಗ್ಗೆ ಕಾಳಜಿ ಹೊಂದಿದ್ದು, ಅವರ ಶಿಕ್ಷಣಕ್ಕೆ ಅನುಕೂಲವಾಗುವಂತೆ
ಈ ವರ್ಷ ಸೈಕಲ್ ಕೊಡಿಸಲಾಗಿದೆ. ಅಲ್ಲದೆ ಬಡತನ ರೇಖೆಗಿಂತ
ಕೆಳಗಿರುವ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವಾದಲ್ಲಿ ಆ ಮಗುವಿನ
ಹೆಸರಲ್ಲಿ ೧೦ ಸಾವಿರ ರೂಪಾಯಿ ಠೇವಣಿ ಇರಿಸುವ ಯೋಜನೆಯನ್ನು ಸರಕಾರ
ಆರಂಭಿಸಿದೆ.
ಇದರೊಂದಿಗೆ ಮುಂದಿನ ವರ್ಷ ಕಿತ್ತೂರು ರಾಣಿ
ಚೆನ್ನಮ್ಮ ಯೋಜನೆಯಡಿಯಲ್ಲಿ ಸರಕಾರವು ಪ್ರತಿ ಜಿಲ್ಲೆಯಲ್ಲಿ ೧೦
ಮಂದಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಭರಿಸಲಿದೆ ಎಂದು
ಕುಮಾರ ಸ್ವಾಮಿ ಗುರುವಾರ ಗುಲ್ಬರ್ಗಾದ ಸಮಾರಂಭವೊಂದರಲ್ಲಿ
ಮಾತನಾಡುತ್ತಾ ಹೇಳಿದ್ದಾರೆ.