|
ಕಾಫಿ ಬೆಳೆಗೆ ಕುತ್ತು, ಬೆಳೆಗಾರನ ಜೇಬಿಗೆ
ಕತ್ತರಿ !
ಭಾರತದಾದ್ಯಂತ ಸುರುಯುತ್ತಿರುವ ಭಾರಿ
ಮಳೆ ಹಾಗೂ ಕೀಟಗಳ ಬಾಧೆಗೆ ಸಿಲುಕಿ ಕಾಫಿಬೆಳೆಯ ಬೆಲೆ ಈ ಬಾರಿ
ಕೆಳಗಿಳಿದಿದೆ.
ಕಳೆದ ವರ್ಷ ಕಾಫಿ ಬೆಳೆಯ ಒಟ್ಟು ಉತ್ಪಾದನೆ
೨೭೪,೦೦ ಟನ್ ಆಗಿತ್ತು. ಈ ವರ್ಷದ ಮಾರ್ಚ್ ತಿಂಗಳವರೆಗಿನ ಉತ್ಪಾದನೆ
ಒಟ್ಟು ಉತ್ಪಾದನೆಗಿಂತ ಶೇ ೮.೩ ರಷ್ಟು ಕಮ್ಮಿಯಾಗಿದೆ.
`ಈ ಬಾರಿ ಬಿದ್ದ ಭಾರಿ ಮಳೆ, ಹವಾಮಾನ
ತೊಂದರೆಗಳು ಹಾಗೂ ಬಿಳಿಕಾಂಡ ಕೊರೆಯುವ ಹುಳುವಿನ ಕಾಟದಿಂದ
ಇಡೀ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಕಾಫಿ ಭಾರಿ ಹಾನಿಯನ್ನು
ಎದುರಿಸಿದೆ. ಎಂದು
ಕರ್ನಾಟಕ ಕಾಫೀ ಬ್ರೋಕರ್ ಖಾಸಗಿ ಸಂಸ್ಥೆಯ ನಿರ್ದೇಶಕ ಬೋಸ್ ಮಂದಣ್ಣ
ಹೇಳಿದ್ದಾರೆ.
ಕಾಫಿಯ ವಿಶ್ವದ ಮಾರುಕಟ್ಟೆಯಲ್ಲಿ ಶೇ
೪.೫ ರಷ್ಟು ಉತ್ಪಾದನೆ ಭಾರತದಲ್ಲಿ ಆಗುತ್ತದೆ. ಒಟ್ಟು ಉತ್ಪಾದನೆಯಲ್ಲಿ
ಶೇ ೭೦ ರಿಂದ ೮೦ ರಷ್ಟನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ.
ಭಾರತದಿಂದ ಇಟಲಿ, ರಷ್ಯ ಇನ್ನಿತರ ಯುರೋಪಿಯನ್ ದೇಶಗಳಿಗೆ
ಕಾಫಿ ಉತ್ಪನ್ನಗಳು ರಫ್ತಾಗುತ್ತದೆ.
ರೊಬಸ್ಟಾ ಮತ್ತು ಅರೇಬಿಕಾ ತಳಿಗಳ ಉತ್ಪಾದನೆ
ಈ ವರ್ಷ ೧೫,೦೦೦ ಹಾಗೂ ೧೦,೦೦೦ ಟನ್ ಆಗುವ ಸಾಧ್ಯತೆಯಿದೆ. ಆದರೆ ಶೇ
೩೦-೪೦ರಷ್ಟು ಬೆಳೆ ನಾಶ ಸಂಭವಿಸಿದೆ ಎಂದು ಕಾಫಿ ಬೋರ್ಡ್ ನ
ಅಧಿಕಾರಿಗಳ ಹೇಳಿಕೆ. |