ಬಿಹಾರ ಸರಕಾರಕ್ಕೆ ಬ್ರಿಟನ್ ಮುಖ್ಯ ಆಯುಕ್ತರ
ಪ್ರಶಂಸೆ
ಹೆಚ್ಚಿನ ನೆರವು ನೀಡುವ ಭರವಸೆ
ಪಾಟ್ನಾ : ಬಿಹಾರದ ನಿತೀಶ್ ಕುಮಾರ್ ನೇತೃತ್ವದ
ಸರಕಾರ ಅಳವಡಿಸಿಕೊಂಡಿರುವ ಕಾನೂನು ಮತ್ತು ಸುವ್ಯಸ್ಥೆಯ ಮಾದರಿಯನ್ನು
ಭಾರತದಲ್ಲಿರುವ ಬ್ರಿಟಿಷ್ ಮುಖ್ಯ ಆಯುಕ್ತ ಸರ್ ಮೈಖೆಲ್ ಆರ್ಥರ್
ಮೆಚ್ಚಿಕೊಂಡಿದ್ದಾರೆ.
ರಾಜ್ಯದ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ನೆರವು
ನೀಡುವುದಾಗಿ ಭರವಸೆ ನೀಡಿರುವ ಮೈಖೆಲ್ ಆರ್ಥರ್, ಬಿಹಾರದ ಕಾನೂನು
ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆಗಳಾಗಿರುವುದಾಗಿ ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಿಗೆ ಬ್ರಿಟಿಷ್
ಸರಕಾರ ಹೆಚ್ಚಿನ ಆರ್ಥಿಕ ನೆರವು ನೀಡಲು ಇಚ್ಛಿಸಿದೆ. ಅಂತರರಾಷ್ಟ್ರೀಯ
ಅಭಿವೃದ್ಧಿ ವಿಭಾಗದ ಮೂಲಕ ಭಾರತಕ್ಕೆ ಬ್ರಿಟನ್ ಸುಮಾರು ೨೫ ಮಿಲಿಯನ್
ಯುಸ್ ಡಾಲರ್ ನೆರವು ನೀಡಲಿದೆ.