ಕುದುರೆಮುಖ ಕೆರೆಕಟ್ಟೆ ಕಚೇರಿ ಮೇಲೆ ನಕ್ಸಲ್ ದಾಳಿ
`ರಾಷ್ಟ್ರೀಯ ಉದ್ಯಾನವನ ಯೋಜನೆ ರದ್ದಾಗಬೇಕು'
ಶೃಂಗೇರಿ : ಮಲೆನಾಡಿನಲ್ಲಿ ಮತ್ತೆ
ಗದ್ದಲವೆಬ್ಬಿಸಿರುವ ನಕ್ಸಲೀಯರು ಬುಧವಾರ ಮುಂಜಾನೆ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ
ವಿಭಾಗ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
೨೦ ಜನರಿದ್ದ ನಕ್ಸಲೀಯರ ತಂಡ
ಕಚೇರಿಯಲ್ಲಿದ್ದ ಸಿಬ್ಬಂದಿ ರಾಜುಚಂದ್ರ ರವೀಂದ್ರ ಅವರನ್ನು ಹೊರಕ್ಕೆ
ದಬ್ಬಿದ್ದಾರೆ. ಕಚೇರಿಯಲ್ಲಿದ್ದ ದಾಖಲೆಗಳಿಗೆ ಬೆಂಕಿ ಹಚ್ಚಿ, ಕಂಪ್ಯೂಟರ್,
ವೈರ್‌ಲೆಸ್ ಮತ್ತು ದೂರವಾಣಿಗಳನ್ನು ನಾಶಪಡಿಸಿದ್ದಾರೆ.
ಆಮೇಲೆ ಗೋದಾಮಿನಲ್ಲಿದ್ದ ಜೀಪಿಗೆ ಪೆಟ್ರೋಲ್
ಸುರಿದು ಬೆಂಕಿ ಹಚ್ಚಿ, ಅರಣ್ಯ ಅಧಿಕಾರಿಯ ಮನೆಯ ಗಾಜುಗಳನ್ನೂ
ಒಡೆದಿದ್ದಾರೆ. ಕಪಾಟುಗಳನ್ನು ಒಡೆದು ಹಾಕಿದ್ದು, ಅದರಲ್ಲಿದ್ದ ೧೫ ಸಾವಿರ
ರೂಪಾಯಿ ಹಣವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಕಚೇರಿ ಗೋಡೆಯ ಮೇಲೆ ಕುದುರೆಮುಖ
ರಾಷ್ಟ್ರೀಯ ಉದ್ಯಾನವನ ಯೋಜನೆ ರದ್ದಾಗಲಿ ಎಂಬ ತಮ್ಮ ಬೇಡಿಕೆಯನ್ನು
ಬರೆದಿದ್ದಾರೆ.