|
ಕರ್ನಾಟಕದ ಪಂಕಜ್
ಅಡ್ವಾಣಿಗೆ ಖೇಲ್‌ರತ್ನ ಪ್ರಶಸ್ತಿ
ನವದೆಹಲಿ
: ಬಿಲಿಯರ್ಡ್ಸ್
ಮತ್ತು ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ
ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
೧೫ ಮಂದಿ ಕ್ರೀಡಾಪಟುಗಳಿಗೆ
ಅರ್ಜುನ್ ಪ್ರಶಸ್ತಿ, ಧ್ಯಾನ್‌ಚಂದ್ ಪುರಸ್ಕಾರಕ್ಕೆ ಮೂವರು ಮತ್ತು
ದ್ರೋಣಾಚಾರ್‍ಯ ಪುರಸ್ಕಾರಕ್ಕೆ ನಾಲ್ವರನ್ನು ಆಯ್ಕೆಮಾಡಲಾಗಿದೆ.
ಕರ್ನಾಟಕದ ಹಿರಿಮೆ:
ಪಂಕಜ್ ಅಡ್ವಾಣಿ ಕರ್ನಾಟಕದ
ಪ್ರತಿಭೆಗೆ ಖೇಲ್ ರತ್ನ ಗೌರವ, ಬ್ಯಾಡ್ಮಿಂಟನ್ ತಾರೆ ಅಪರ್ಣಾ ಪೊಪಟ್
, ಈಜುಗಾರ್ತಿ ಶಿಖಾ ಟಂಡನ್‌ಗೆ ಅರ್ಜುನ್ ಪುರಸ್ಕಾರ ಹಾಗೂ ಅಥ್ಲೀಟ್
ಉದಯ್ ಕೆ ಪ್ರಭು ಧ್ಯಾನ್‌ಚಂದ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಾಕ್ಸರ್ ಎಂ. ವೇಣುಗೆ ದ್ರೋಣಾಚಾರ್‍ಯ ಪ್ರಶಸ್ತಿಯ ಗೌರವ ಸಲ್ಲಲಿದೆ. |