ಸರ್ಕಾರದಿಂದ ಸಾವಿರ ಹಳ್ಳಿಗಳ ದತ್ತು ಸ್ವೀಕಾರ
ಹಿರೇಮನ್ನೂರು/ಗುಲ್ಬರ್ಗ: ಸುವರ್ಣ ಕರ್ನಾಟಕ
ಮಹೋತ್ಸವದ ಅಂಗವಾಗಿ ಸರ್ಕಾರವು ೧೦೦೦ ಹಳ್ಳಿಗಳನ್ನು ದತ್ತು
ತೆಗೆದುಕೊಳ್ಳುತ್ತಿದೆ. ಅಲ್ಲಿನ ಮೂಲಭೂತ ಸೌಲಭ್ಯವನ್ನು ಬೇಗನೆ
ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.
ಕುಮಾರಸ್ವಾಮಿ ಹೇಳಿದ್ದಾರೆ.
ಗ್ರಾಮೀಣ ರಸ್ತೆ ಅಭಿವೃದ್ಧಿ ಕೆಲಸವನ್ನು ಲೋಕೋಪಯೋಗಿ
ಇಲಾಖೆಗೆ ನೀಡಲಾಗುವುದು. ಹಳ್ಳಿಗಳ ರಸ್ತೆ ಅಭಿವೃದ್ಧಿಗಾಗಿ ಸರ್ಕಾರವು
ಸುಮಾರು ೨, ೦೦೦ ಕೋಟಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡುತ್ತಿದೆ.
ಭೀಮಾ ನದಿ ಪ್ರವಾಹದಿಂದ ತತ್ತರಿಸಿದ ಕುಡಿಗನೂರು, ಶಿವೂರು, ಅಫ್ಜಲಪುರ
ತಾಲ್ಲೂಕಿನ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಶೀಘ್ರವಾಗಿ ಗಮನಹರಿಸಲಾಗುವುದು
ಎಂದು ಕುಮಾರಸ್ವಾಮಿ ಹೇಳಿದ್ದಾರೆ.