ತುಮಕೂರಿನಲ್ಲಿ ವಿದ್ಯಾರ್ಥಿಗಳ ಅನಿರ್ಧಿಷ್ಟ ಮುಷ್ಕರ
ತುಮಕೂರು: ಸ್ನಾತಕೋತ್ತರ ಪದವಿ
ವಿದ್ಯಾರ್ಥಿಗಳಿಗೆ ಕಾಲೇಜಿನ ಹಾಸ್ಟೆಲ್‌ನಲ್ಲಿ ಸ್ಥಳಾವಕಾಶ ನೀಡದಿರುವ
ತುಮಕೂರು ವಿಶ್ವವಿದ್ಯಾಲಯದ ಹಾಸ್ಟೆಲ್ ಪ್ರಾಧಿಕಾರದ ವಿರುದ್ಧ
ಕಾಲೇಜಿನ ವಿದ್ಯಾರ್ಥಿಗಳು ಅಗಸ್ಟ್ ೩೦ ರಿಂದ ಅನಿರ್ಧಿಷ್ಟ ಮುಷ್ಕರ ನಡೆಸುವುದಾಗಿ
ಘೋಷಿಸಿದ್ದಾರೆ.
ಕೆಟಗರಿ -೧ ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ
ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಸ್ಥಳಾವಕಾಶವನ್ನು ನಿರಾಕರಿಸಲಾಗಿದೆ.
ಹೆಚ್ಚಿನ ಫೀ ಪಡೆದರೂ ಯಾವುದೇ ಸೌಲಭ್ಯವನ್ನು ನೀಡುತ್ತಿಲ್ಲ
ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.೫೦ ರಷ್ಟು ಮಾತ್ರ
ಮೀಸಲಾತಿ ನೀಡಿದರೆ ಪ್ರವೇಶಾತಿ ಕ್ರಮಗಳನ್ನು ಹಾಗೂ ಸಿಇಟಿ ಕೌನ್ಸಿಲಿಂಗ್
ಅನ್ನು ಬಹಿಷ್ಕರಿಸುವುದಾಗಿ ವಿದ್ಯಾರ್ಥಿ ಸಂಘಟನೆ ಹೇಳಿದೆ.