ಬಿಸ್ಮಿಲ್ಲಾಖಾನ್ ಕೊನೆಯಾಸೆ ಪೂರೈಸುವೆ -ಸುಮಾ
ಇಂಡಿಯಾ ಗೇಟ್ ಬಳಿ ಸಂಗೀತ ಕಚೇರಿ
ವಾರಣಾಸಿ : ಇಂಡಿಯಾ ಗೇಟ್‌ನಲ್ಲಿ ಷಹನಾಯಿ
ಕಚೇರಿ ನಡೆಸುವ ಬಿಸ್ಮಿಲ್ಲಾಖಾನ್‌ರ ಇಚ್ಛೆಯನ್ನು ತಾನು ಪೂರೈಸುವುದಾಗಿ
ಬನಾರಸ್ ಘರಾನಾದ ಗಾಯಕಿ ಹಾಗೂ ಬಿಸ್ಮಿಲ್ಲಾ ಸಾಕು ಪುತ್ರಿ ಡಾ.ಸುಮಾ
ಘೋಷ್ ಹೇಳಿದ್ದಾರೆ.
ಬಾಬಾ ಅವರ ಕೊನೆಯಾಸೆಯನ್ನು ನಾನು ನೆರವೇರಿಸುತ್ತೇನೆ.
ನನ್ನ ಸಾಕು ಅಣ್ಣಂದಿರಾದ ನೈಯರ್ ಹುಸೇನ್, ಜಮಿನ್ ಹುಸೇನ್(ಷಹನಾಯಿ
ವಾದಕರು) ಮತ್ತು ನಾಝಿಮ್ ಹುಸೇನ್(ತಬಲಾ ವಾದಕ)ರ
ಜೊತೆಗೆ ಕಚೇರಿ ನಡೆಸವ ಇಚ್ಛೆಯನ್ನು ಘೋಷ್ ವ್ಯಕ್ತಪಡಿಸಿದ್ದಾರೆ.
ಈ ಕಚೇರಿಯನ್ನು ಆಯೋಜಿಸುವುದಕ್ಕೆ
ಯಾರೂ ಮುಂದೆ ಬರದೇ ಇದ್ದಲ್ಲಿ ತಾವೇ ಸ್ವತಃ ಕಚೇರಿಯನ್ನು
ಆಯೋಜಿಸುವುದಾಗಿ ಹೇಳಿರುವ ಸುಮಾ, ದೇಶಕ್ಕಾಗಿ ಪ್ರಾಣತೆತ್ತವರಿಗೆ
ಶ್ರದ್ಧಾಂಜಲಿ ರೂಪದಲ್ಲಿ ಈ ಕಚೇರಿಯನ್ನು ಅರ್ಪಿಸಲಿದ್ದಾರೆ.
ಪೂರಕ ವರದಿಗೆ
ಬಿಸ್ಮಿಲ್ಲಾ ಖಾನ್ ಕೊನೆ ಕನಸು ನನಸಾಗಲೇ ಇಲ್ಲ