ಎಲ್ಲ ಜಾತಿಯವರೂ ಅರ್ಚಕರಾಗುವುದೇ...ಸುಪ್ರಿಂಕೋರ್ಟ್
ತಡೆ
ಚೆನ್ನೈ : ಹಿಂದೂ ಜನಾಂಗದ ಎಲ್ಲ
ಜಾತಿಯವರನ್ನು ಅರ್ಚಕರಾಗಿ ನೇಮಿಸುವ ತನ್ನ ನಿರ್ಧಾರವನ್ನು
ತಮಿಳುನಾಡು ಸರಕಾರ ಕೈಬಿಟ್ಟಿದೆ.
ಸರಕಾರದ ಹೊಸ ನಿರ್ಧಾರಕ್ಕೆ ಜುಲೈ
೧೬ರಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ
ಸರಕಾರ ಈ ನಿರ್ಧಾರವನ್ನು ಕೈಬಿಟ್ಟಿದೆ.
ಸಂವಿಧಾನದ ೨೫ನೇ ವಿಧಿಯಾದ ಧಾರ್ಮಿಕ ಹಕ್ಕನ್ನು
ಉಲ್ಲೇಖಿಸಿ ದೇವಸ್ಥಾನಕ್ಕೆ ಎಲ್ಲಾ ಜಾತಿಯ ಅರ್ಚಕರನ್ನು ನೇಮಿಸುವುದು
ಸರಿಯಲ್ಲ ಎಂಬ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್
ತಡೆಯಾಜ್ಞೆ ನೀಡಿದೆ.
ಹಿನ್ನೆಲೆ : ೧೯೭೧ರಲ್ಲಿ ಸುಪ್ರಿಂ ಕೋರ್ಟ್
ಅನುವಂಶೀಯವಾಗಿ ಅರ್ಚಕರನ್ನು ದೇವಸ್ಥಾನಗಳಲ್ಲಿ ನೇಮಿಸುವುದನ್ನು
ಕೈಬಿಡುವ ತಮಿಳುನಾಡಿನ ಹೊಸ ಕಾಯ್ದೆಯನ್ನು ಆಧರಿಸಿ, ಅರ್ಚಕ
ಸ್ಥಾನಕ್ಕೆ ಎಲ್ಲ ಜಾತಿಗೂ ಸೇರಿದ ಸೂಕ್ತ ಅಭ್ಯರ್ಥಿಗಳನ್ನು ನೇಮಿಸುವುದಾಗಿ
ನಿರ್ಣಯಿಸಲಾಗಿತ್ತು.