|
ಮೀಸಲಾತಿ ವಿಧೇಯಕ ಮಂಡನೆಗೆ ಸರ್ಕಾರ
ಸಿದ್ಧತೆ
ನವದೆಹಲಿ: ಸರ್ಕಾರಿ ಸ್ವಾಮ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ
ವ್ಯಾಸಂಗ ಮಾಡ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೭ ರಷ್ಟು ಮೀಸಲಾತಿ
ದೊರೆಯಲಿದೆ.
ಮೀಸಲಾತಿ ವಿಧೇಯಕ ಮಂಡನೆಗೆ ಕೇಂದ್ರ ಸಂಪುಟವು ತನ್ನ
ಅಂಗೀಕಾರವನ್ನು ಸೂಚಿಸಿದ್ದು
ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.ಸಂಪುಟದಲ್ಲಿ ನಡೆದ
ವಿಶೇಷ ಸಭೆಯಲ್ಲಿ
ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಎಂದು ಮಾಹಿv ಹಾಗೂ ಪ್ರಸಾರ
ಖಾತೆ ಸಚಿವ ಪಿ.ಆರ್. ದಾಸ್‌ಮುನ್ಷಿ ಹೇಳಿದರು.
ಹಂತಹಂತವಾಗಿ ಒಬಿಸಿ ಕೋಟಾ ಜಾರಿಗೆ ಬರಲಿದೆ. ಶುಕ್ರವಾರ ಮೀಸಲಾತಿ ಮಸೂದೆ
ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಕೇಂದ್ರದ ನಿರ್ಣಯದ ವಿರುದ್ಧ
ದೇಶಾದಾದ್ಯಂತ ವೈದ್ಯರುಗಳು ಮುಷ್ಕರ ಹೂಡುವುದಾಗಿ ದೆಹಲಿಯ
ವೈದ್ಯಕೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಆದರೆ ತುತುಚಿಕಿತ್ಸೆ ಹಾಗೂ ಹೊರರೋಗಿಗಳ ಘಟಕದ ರೋಗಿಗಳಿಗೆ
ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. `ಸರ್ವೋಚ್ಚ ನ್ಯಾಯಾಲಯದ
ಆಶ್ವಾಸನೆಯ ಮೇರೆಗೆ ಈ ಮುಂಚೆ ೧೭ ದಿನ ದೇಶವ್ಯಾಪಿ ನಡೆದ ಮುಷ್ಕರವನ್ನು
ಹಿಂತೆಗೆದುಕೊಂಡಿದ್ದೆವು'.
`ಈಗ
ಸರ್ಕಾರದ ನಿರ್ಧಾರವು ಅಸಂವಿಧಾನತ್ಮಕವಾಗಿದೆ, ಪ್ರತಿಭಟಿಸಲೇ ಬೇಕಾಗಿದೆ'
ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ಶಾಲೆಯ
ವಿದ್ಯಾರ್ಥಿಗಳು ಹೇಳಿದ್ದಾರೆ.
|