|
ಜನಾರ್ದ ರೆಡ್ಡಿಯಿಂದ ನಾಳೆ ಸಾಕ್ಷ್ಯಾಧಾರ
`ಸಿಡಿ'ಯಲಿದೆ.
ಬಳ್ಳಾರಿ: ರಾಜ್ಯ ರಾಜಕೀಯದಲ್ಲಿ ಸಂಚಲನವನ್ನು
ಉಂಟುಮಾಡಿರುವ ಗಣಿಲಂಚ ಪ್ರಕರಣ ಬುಧವಾರ ಹೊಸ ತಿರುವು ಪಡೆಯುವ
ಸಾಧ್ಯತೆಯಿದೆ.
ಬಿಜೆಪಿಯಿಂದ ಅಮಾನತುಗೊಂಡ ಶಾಸಕ ಜನಾರ್ದನರೆಡ್ಡಿ ಬುಧವಾರ
ಗಣಿಲಂಚ ಪ್ರಕರಣಕ್ಕೆ ಸಾಕ್ಷಿ ಎನ್ನಲಾದ `ಸಿಡಿ' ಯನ್ನು ಬಿಡುಗಡೆ ಮಾಡುವ
ಸಾಧ್ಯತೆಯಿದೆ. ಈ ವಿಷಯವನ್ನು ಸ್ವತಃ ಜನಾರ್ದನ ರೆಡ್ಡಿಯೇ ಸುದ್ದಿಗಾರರಿಗೆ
ತಿಳಿಸಿದ್ದಾರೆ.
ಇತ್ತ ರೆಡ್ಡಿ ಕಾನೂನು ತಜ್ಞರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದರೆ ಅತ್ತ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯನ್ನು
ಗುರುವಾರ ನಡೆಸುವುದಾಗಿ ಎರಡೂ ಪಕ್ಷದ ವಕ್ತಾರರು ಹೇಳಿಕೆ ನೀಡಿದ್ದಾರೆ.
ಬಳ್ಳಾರಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜನಾರ್ದನರೆಡ್ಡಿ ಸಲ್ಲಿಸಿದ
ಮಾನನಷ್ಟ ಮೊಕದ್ದಮೆ ವಿಚಾರಣೆಗಾಗಿ ಮುಖ್ಯಮಂತ್ರಿ ಎಚ್.ಡಿ.
ಕುಮಾರಸ್ವಾಮಿ, ಸಚಿವರಾದ ಎಂ.ಪಿ. ಪ್ರಕಾಶ್ ಹಾಗೂ ಸಿ. ಚೆನ್ನಿಗಪ್ಪ
ಸೆ.೭ ರಂದು ಖುದ್ದಾಗಿ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಸರ್ಕಾರ ಕೂಡ ಜು.೨೮ ರಂದು ಬೆಂಗಳೂರಿನ ಹೆಚ್ಚುವರಿ ಸಿವಿಲ್
ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ
ಹೂಡಿತ್ತು. ಈ ಬಗ್ಗೆ ವಿಚಾರಣೆಗಾಗಿ ಜನಾರ್ದನ ರೆಡ್ಡಿಯು ಸೆ.೪ ರಂದು ಕೋರ್ಟ್‌ಗೆ
ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
|