|
ನೆರೆ ಪರಿಹಾರಕ್ಕೆ ಕಲಾಂ
ಗೆ ಸಿಎಂ ಮನವಿ
ಬೆಂಗಳೂರು: ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿ
ಹೆಚ್.ಡಿ. ಕುಮಾರಸ್ವಾಮಿ ೧,೪೦೦ ಕೋಟಿ ರೂಗಳ ಪರಿಹಾರ ಧನಕ್ಕಾಗಿ
ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಪ್ರಧಾನಿ ಮನ ಮೋಹನ ಸಿಂಗ್‌ಗೆ
ಅಗಸ್ಟ್ ೮ ರಂದು ನೆರೆ ಪರಿಹಾರಕ್ಕಾಗಿ ೯೦೬.೭೨ ಕೋಟಿಗಳ ನೆರವು
ಕೋರಿತ್ತು. ಬರ ಪರಿಹಾರಕ್ಕಾಗಿ ೫೦೦ ಕೋಟಿಯನ್ನು ಹಾಗೂ ೩ ಲಕ್ಷ ಮೆಟ್ರಿಕ್
ಟನ್ ಆಹಾರ ಧಾನ್ಯಗಳಿಗಾಗಿ ಕೂಡ ಕೇಳಲಾಗಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಳೆನಾಶವಾಗಿದ್ದು, ಕಳೆದ ವರುಷ ಪ್ರವಾಹದಿಂದ
ತತ್ತರಿಸಿದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ಕೆಲವೆಡೆ ಸತತವಾಗಿ
ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲದರ ನಿರ್ವಹಣೆ ಸಾಕಷ್ಟು ಹಣ ಬೇಕಾಗಿದ್ದು
ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿರುವ ಬಗ್ಗೆ ರಾಷ್ಟ್ರಪತಿ
ರಾಷ್ಟ್ರಪತಿ ಅಬ್ದುಲ್ ಕಲಾಂಗೆ ದೂರು ರೂಪದ ಮನವಿಯನ್ನು ಸಲ್ಲಿಸಲಾಗಿದೆ
ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
|