ದೇವೂ ಇಲೆಕ್ಟ್ರಾನಿಕ್ಸ್ ವೀಡಿಯೋಕಾನ್ ತೆಕ್ಕೆಗೆ ?
ಮುಂಬಯಿ
: ಇಲೆಕ್ಟ್ರಾನಿಕ್ ವಸ್ತುಗಳ ತಯಾರಕ, ಭಾರತೀಯ ಮೂಲದ
ವೀಡಿಯೋಕಾನ್ ಸಂಸ್ಥೆಯು ದಕ್ಷಿಣ ಕೊರಿಯಾದ ದೇವೂ ಇಲೆಕ್ಟ್ರಾನಿಕ್
ಕಂಪೆನಿಯನ್ನು ತನ್ನ ತೆಕ್ಕೆಗೆ ಬರಮಾಡಿಕೊಳ್ಳುವ ನಿರೀಕ್ಷೆ ಇದು.
ದೇವೂ ಇಲೆಕ್ಟ್ರಾನಿಕ್ಸ್‌ಗೆ ವೀಡಿಯೋಕಾನ್ ಸಲ್ಲಿಸಿರುವ ಹರಾಜು ಮೊತ್ತ
೨,೯೯೦ ಕೋಟಿ ರೂಪಾಯಿಗಳು. ಆದರೆ ದೇವೂ ಕಂಪೆನಿಯನ್ನು
ಕೊಳ್ಳಲು ಇತರ ಕಂಪೆನಿಗಳೂ ಮುಂದೆ ಬಂದಿದ್ದು ಈ ಸಂದರ್ಭದಲ್ಲಿ
ಯಾವುದೇ ಪ್ರತಿಕ್ರಿಯೆ ನೀಡಲು ವೀಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್
ಎನ್. ಧೂತ್ ನಿರಾಕರಿಸಿದ್ದಾರೆ.