Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಸಾಯಿಬಾಬಾಗೆ ಚಿನ್ನದ ಕಿರೀಟ : ಠಾಕ್ರೆಗೆ ಸಿಟ್ಟು

ಈ ಹಣವನ್ನು ಜನಸೇವೆಗೆ ಬಳಸಬಾರದೇ ?

 

ಮುಂಬಯಿ: ಶಿರಡಿ ಸಂಸ್ಥಾನ ಟ್ರಸ್ಟ್‌ನ ಮುಖ್ಯಸ್ಥ ಜಯಂತ ಸಸನೆ ಇತ್ತೀಚೆಗೆ ಶಿರಡಿ ಸಾಯಿಬಾಬ ಮೂರ್ತಿಗೆ ಚಿನ್ನದ ಕಿರೀಟವನ್ನು ತೊಡಗಿಸುವುದಾಗಿ ಪ್ರಕಟಿಸಿರುವುದನ್ನು ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯಿಂದ ತೀವ್ರ ಟೀಕಿಸಿದ್ದಾರೆ.

 

ಚಿನ್ನದ ಕಿರೀಟ ನಿರ್ಮಾಣಕ್ಕೆ ಬಳಸುವ ಹಣವನ್ನು ಸರಿಯಾಗಿ ಸದುಪಯೋಗ ಮಾಡಬೇಕು ಎನ್ನುವುದು ಶಿರಡಿ ಸಂಸ್ಥಾನ ಟ್ರಸ್ಟ್‌ಗೆ ಬಾಳಾಠಾಕ್ರೆ ಸಲಹೆ.

 

`ಇದು ಯಾವ ರೀತಿಯ ಭಕ್ತಿಯೊ ತಿಳಿದಿಲ್ಲ. ಹಣವನ್ನು ಪ್ರವಾಹ ಪರಿಹಾರಕ್ಕೆ, ಬಾಂಬ್ ಸ್ಫೋಟದಿಂದ ನೊಂದವರಿಗೆ ನೀಡಲು ಬಳಸಿದರೆ ಸೂಕ್ತ ಎಂದು ತಮ್ಮ ಪಕ್ಷದ ಮುಖವಾಣಿ `ಸಾಮ್ನಾದಲ್ಲಿ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ತಮ್ಮ ಅಭಿಪ್ರಾಯವನ್ನು ಹೇಳಲು ಸ್ವತಂತ್ರವಿದೆ. ಆದರೆ ಟ್ರಸ್ಟ್‌ಗೆ ಎಲ್ಲಾ ಭಕ್ತಾದಿಗಳಿಂದ ಬಂದ ಹಣವನ್ನು ಚಿನ್ನದ ಕಿರೀಟಕ್ಕೆ ಉಪಯೋಗುತ್ತಿದ್ದೇವೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಕಷ್ಟು ಹಣವನ್ನು ಟ್ರಸ್ಟ್ ನಿಂದ ಈಗಾಗಲೇ ನೀಡಲಾಗಿದೆ ಎಂದು ಟ್ರಸ್ಟ್ ನ ಮುಖ್ಯಸ್ಥ ಜಯಂತ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com