Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಶಬರಿಮಲೆಗೆ ಹೋಗಬೇಕೆಂಬ ಹಠ ಮಹಿಳೆಯರಿಗೇಕೆ ?

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಈಗಿರುವ ಪದ್ಧತಿಯನ್ನು ಬದಲಿಸಬೇಕಾಗಿಲ್ಲ ಎನ್ನುವುದು ಅನಿತಾ ನಾಯರ್ ಅಭಿಪ್ರಾಯ.

 

ಶಬರಿಮಲೆ ದೇವಸ್ಥಾನಕ್ಕೆ ಹೆಂಗಸರಿಗೆ ಪ್ರವೇಶ ಕಲ್ಪಿಸಬೇಕು ಎಂಬ ಆಗ್ರಹ ಮಹಿಳೆಯರ ಸರ್ವಾನುಮತವಿದೆಯೇ ? ಇಲ್ಲ.

 

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಈಗಿರುವ ಪದ್ಧತಿಯನ್ನು ಬದಲಿಸಬೇಕಾಗಿಲ್ಲ ಎಂದು ಖ್ಯಾತ ಕಾದಂಬರಿಗಾರ್ತಿ ಅನಿತಾ ನಾಯರ್ ಆಭಿಪ್ರಾಯಪಟ್ಟಿದ್ದಾರೆ. ಅವರು ಭಾನುವಾರ ತಿರುವನಂತಪುರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡುತ್ತಿದ್ದರು.

 

ನೂರಾರು ವರ್ಷಗಳ ಹಿಂದಿನಿಂದ ದೇವಸ್ಥಾನ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಯಾಕೆ ಬದಲಾಯಿಸಬೇಕು ? ಹಲವು ವರ್ಷಗಳಿಂದ ನಡೆದು ಬಂದಿರುವ ಈ ಸಂಪ್ರದಾಯವನ್ನು ಬದಲಾಯಿಸುವುದರಿಂದ ಒಂದು ದೊಡ್ಡ ಸಮುದಾಯದ ನಂಬಿಕೆಗೆ ಪೆಟ್ಟು ಬೀಳುತ್ತದೆ. ಅದಲ್ಲದೆ ಮಹಿಳೆಗೆ ಮನೆಯಲ್ಲಿ ದೇವರ ಪೂಜೆ ನಡೆಸಲು ಅವಕಾಶ ಇರುವಾಗ ದೇವಸ್ಥಾನಕ್ಕೆ ಹೋಗಬೇಕೆಂಬ ಗೋಜಲು ಯಾಕೆ ಎಂಬುದು ಅನಿತಾ ಪ್ರಶ್ನೆ.

 

ಅನಿತಾ ನಾಯರ್ ಮೂಲತಃ ಕೇರಳದವರು. ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಾರೆ. ಆಕೆಯ ಪ್ರಕಾರ ಗುರುವಾಯೂರು ಮತ್ತು ಶಬರಿಮಲೆಯಲ್ಲಿ ಭಕ್ತರ ಜಂಗುಳಿ ಸಿಕ್ಕಾಪಟ್ಟೆ ಇರುತ್ತದೆ. ಅದರ ಮಧ್ಯೆ ಪ್ರಾರ್ಥನೆ ಸಲ್ಲಿಸುವ ವ್ಯವಧಾನ ಎಲ್ಲಿರುತ್ತದೆ ಎನ್ನುವುದು ಅನಿತಾ ನಾಯರ್ ಪ್ರಶ್ನೆ.

 

ನೀವೇನಂತೀರಿ ?

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com