|
ಗಣೇಶನ ಜೊತೆ ಎಲ್ಲಾ ದೇವ್ರೂ ಮಾಡ್ತಿದ್ದಾರೆ
ಕ್ಷೀರಪಾನ
ನವದೆಹಲಿ: ಉತ್ತರ ಭಾರತದಲ್ಲಿ ಎಲ್ಲಾ ದೇವರುಗಳು
ಕ್ಷೀರಪಾನ ಮಾಡುತ್ತಿರುವ ವರದಿಯಾಗಿದೆ. ಕಾನಪುರ, ಅಲಹಾಬಾದ್
ಮತ್ತು ಕುರುಕ್ಷೇತ್ರದಲ್ಲಿ ದೇವರ ವಿಗ್ರಹಗಳು ಹಾಲು
ಕುಡಿಯುತ್ತಿರುವುದಾಗಿ ಭಕ್ತಾದಿಗಳು ಹೇಳಿದ್ದಾರೆ.
ಮೊದಲು ಈ ರೀತಿಯ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ದುರ್ಗಾ
ದೇವಿ ಹಾಲು ಕುಡಿಯುತ್ತಿರುವುದಾಗಿ ಮಹಿಳೆಯೊಬ್ಬಳು ಹೇಳಿದಾಗ ಶುರುವಾಯಿತು.
ಕೆಲವೇ ಕೆಲವು ಗಂಟೆಗಳಲ್ಲಿ ಸುದ್ದಿಯು ದೇಶವ್ಯಾಪಿ ಹರಡಿತು.
ದುರ್ಗೆಯ ನಂತರ ಶಿವ, ಗಣೇಶನ ವಿಗ್ರಹಗಳೂ ಕೂಡ ಹಾಲು
ಕುಡಿಯುತ್ತಿರುವುದಾಗಿ ಕೋಲ್ಕತ್ತಾ, ಪಾಟ್ನಾದಿಂದ ವರದಿಯಾಗಿದೆ.
೧೯೯೫ ರಲ್ಲೂ ಇದೇ ರೀತಿ ಘಟನೆ ಸಂಭವಿಸಿತ್ತು. ಆಗ ಭಾರತದಲ್ಲಷ್ಟೇ
ಅಲ್ಲದೇ ಇಂಗ್ಲೆಂಡ್, ಕೆನೆಡಾ, ದುಬೈ ಮತ್ತು ನೇಪಾಳದಲ್ಲಿ ಈ
ರೀತಿಯ ಘಟನೆಯು ವರದಿಯಾಗಿತ್ತು. ವಿಚಾರವಾದಿಗಳು ಹೊರ ಮೇಲ್ಮೈ
ಒತ್ತಡದಿಂದ ಈ ರೀತಿ ಸಂಭವಿಸಿರಬಹುದು ಎನ್ನುತ್ತಾರೆ. ಆದರೆ `ಜನ
ಮರುಳೋ, ಜಾತ್ರೆ ಮರುಳೋ' ಎಂಬಂತೆ ಜನರ ಮಹಾಪೂರವೇ
ದೇವಸ್ಥಾನದ ಕಡೆಗೆ ಹರಿದು ಬರುತ್ತಿದೆ. |