Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಬಿಸ್ಮಿಲ್ಲಾ ಖಾನ್ ಕೊನೆ ಕನಸು ನನಸಾಗಲೇ ಇಲ್ಲ

 

ನವದೆಹಲಿ: ಇಂಡಿಯಾ ಗೇಟ್ ಬಳಿ ಷಹನಾಯಿ ನುಡಿಸುವ ಬಿಸ್ಮಿಲ್ಲಾ ಖಾನ್ ಕೊನೆಯಾಸೆ ಕಟ್ಟ ಕಡೆಗೂ ನೆರವೇರಿಲ್ಲ.

 

ಭಾರತದ ಪ್ರಥಮ ಗಣರಾಜ್ಯ ದಿನದಂದು ಉಸ್ತಾದ್ ಬಿಸ್ಮಿಲ್ಲಾ ಖಾನ್ ಷಹನಾಯಿ ನುಡಿಸಿದ ನಂತರ ಇಂಡಿಯಾ ಗೇಟ್ ಬಳಿ ಷಹನಾಯಿ ನುಡಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಖಾನ್ ಆಸೆಯಂತೆ ಇಂಡಿಯಾ ಗೇಟ್ ಬಳಿ ಷಹನಾಯಿ ಕಚೇರಿ ಆಯೋಜಿಸಿದ್ದರೂ ಭಯೋತ್ಪಾದಕರ ಭಯದಿಂದ ಆ ಕಚೇರಿಯನ್ನು ರದ್ದುಗೊಳಿಸಲಾಗಿತ್ತು.

 

ಆದರೆ ಅವರು ಮುಸ್ಲಿಂ ಎಂಬ ಕಾರಣಕ್ಕೆ ಷಹನಾಯಿ ನುಡಿಸಲು ಅವಕಾಶ ದಕ್ಕಲಿಲ್ಲ ಎಂಬ ಊಹಾಪೋಹಗಳೂ ಎದ್ದಿದ್ದವು. ಆದರೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ತನಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಖಾನ್ ಸ್ಪಷ್ಟವಾಗಿ ಹೇಳಿದ್ದರು. ಸಂಗೀತಕ್ಕೆ ಜಾತಿಯಿಲ್ಲ. ಜಗತ್ತಿನಾದ್ಯಂತ ನನ್ನ ಷಹನಾಯಿಯನ್ನು ಮೆಚ್ಚಿದವರಿದ್ದಾರೆ ಎನ್ನುವ ಮೂಲಕ ಖಾನ್ ತಮ್ಮನ್ನು ಮುಸ್ಲಿಂ ಎಂದು ಪ್ರತ್ಯೇಕವಾಗಿ ಗುರುತಿಸುವವರ ಬಾಯಿ ಮುಚ್ಚಿಸಿದ್ದರು.

 

ಬನಾರಸ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮತ್ತು ಭಾರತದ ನಾಗರಿಕನೊಬ್ಬನಿಗೆ ಸಲ್ಲಬಹುದಾದ ದೊಡ್ಡ ಗೌರವ ಭಾರತ ರತ್ನವೂ ಬಿಸ್ಮಿಲ್ಲಾ ಖಾನ್‌ಗೆ ಸಂದಿದೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com