ಆ.೨೩ಕ್ಕೆ ಗಣಿಬಾಂಬ್ ಸ್ಫೋಟ -ಜನಾರ್ದನ ರೆಡ್ಡಿ
ಬಳ್ಳಾರಿ : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಿರುವುದಾಗಿ
ಆರೋಪಿಸಲಾಗಿರುವ ಗಣಿಲಂಚ ಪ್ರಕರಣವನ್ನು ಆಗಸ್ಟ್ ೨೩ರಂದು
ಬಹಿರಂಗಗೊಳಿಸುವುದಾಗಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಪ್ರಕಟಿಸಿದ್ದಾರೆ.
೧೫೦ ಕೋಟಿ ರೂಪಾಯಿ ಗಣಿ ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ
ಆರೋಪದ ಮೇಲೆ ಬಳ್ಳಾರಿ ನ್ಯಾಯಾಲಯ ಮುಖ್ಯಮಂತ್ರಿ
ಕುಮಾರಸ್ವಾಮಿಗೆ ಸಮನ್ಸ್ ಜಾರಿಗೊಳಿಸಿದೆ.
೨೩ನೇ ತಾರೀಕಿನಂದು ಶ್ರಾವಣ ಮಾಸದ ಕೊನೆಯ
ಅಮಾವಾಸ್ಯೆಯಾಗಿದ್ದು ಆ ದಿನ ಕುಮಾರಸ್ವಾಮಿ ಸರಕಾರಕ್ಕೆ ಹಾನಿಯಾಗಲಿದೆ
ಎಂಬುದು ಜನಾರ್ದನ ರೆಡ್ಡಿ ವರಸೆ.