ಬೆಳಗಾವಿ ವಿಶ್ವಕನ್ನಡ ಸಮ್ಮೇಳನ ಮುಂದೂಡಿಕೆ
ಬೆಂಗಳೂರು:
ಕನ್ನಡ ರಾಜ್ಯೋತ್ಸವದ ದಿನದಂದು ಸುವರ್ಣ ಕರ್ನಾಟಕ ಮಹೋತ್ಸವದ ಉದ್ಘಾಟನೆಯ
ಜೊತೆಗೆ ವಿಶ್ವಕನ್ನಡ ಸಮ್ಮೇಳನವನ್ನು ನಡೆಸಲು ಉದ್ದೇಶಿಸಿದ್ದ ಸರ್ಕಾರವು ವಿವಿಧ
ಕಾರಣಗಳಿಂದ
ಸಮ್ಮೇಳನವನ್ನು ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ರಜೆಯಲ್ಲಿ ನಡೆಸಲು
ನಿರ್ಧರಿಸಿದೆ.
ಈ ಬಗ್ಗೆ ಆಗಸ್ಟ್
೪ ರಂದು ಮುಖ್ಯಮಂತ್ರಿ ಹೆಚ್. ಡಿ .ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ
ಚರ್ಚಿಸಿ ದಿನಾಂಕ ನಿರ್ಧರಿಸಲಾಗುವುದು.
ಸಮ್ಮೇಳನದಲ್ಲಿ
ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ಇನ್ನೂ ನಿರ್ಣಯವಾಗಿಲ್ಲ. ವಿವಿಧ ಅಕಾಡೆಮಿಗಳು
ನಡೆಸಲಿರುವ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಗುವುದು.
ಸುವರ್ಣ ಕರ್ನಾಟಕ
ಮಹೋತ್ಸವವನ್ನು ನಗರದ ಕಂಠೀರವ ಕ್ರೀಡಾಂಗಣ ಅಥವಾ ವಿಧಾನಸೌಧದ ಮುಂಭಾಗದಲ್ಲಿ
ನಡೆಸಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಯೊಬ್ಬರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು
ಪ್ರಧಾನ ಮಾಡಲು ಸರ್ಕಾರ ಉದ್ದೇಶಿಸಿದೆ.