ವೃತ್ತಿ ಶಿಕ್ಷಣಕ್ಕೆ ನೀಡಿರುವ
ಸಬ್ಸಿಡಿ ಹಿಂದೆಗೆತ
ಮಾತಿಗೆ ತಪ್ಪಿದ ಸರ್ಕಾರ

ಬೆಂಗಳೂರು :
ವೃತ್ತಿ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಬ್ಸಿಡಿ ನೀಡುವ ತನ್ನ ಹಿಂದಿನ ನಿರ್ಧಾರದಿಂದ
ರಾಜ್ಯ ಸರ್ಕಾರ ಹಿಂದೆ ಸರಿದಿದೆ.
ಉದ್ದೇಶಿತ ಸಬ್ಸಿಡಿಯಿಂದ
ಸರ್ಕಾರಕ್ಕೆ ಮೂವತ್ತು ಕೋಟಿಯಷ್ಟು ಹೊರೆ ಬೀಳುತ್ತದೆ ಎಂದು ಆರ್ಥಿಕ ಇಲಾಖೆ ಅಭಿಪ್ರಾಯ
ಪಟ್ಟಿದೆ. ಹಾಗಾಗಿ ಶುಲ್ಕ ರಿಯಾಯತಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ
ಸ್ವಾಮಿ ಹೇಳಿದ್ದಾರೆ.
ಶುಲ್ಕ, ಸೀಟು ಹಂಚಿಕೆ
ವಿಷಯದಲ್ಲಿ ಪ್ರತಿ ವರ್ಷ ಗೊಂದಲವಾಗುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು ಮುಂದಿನ
ವರ್ಷದ ವೃತ್ತಿ ಶಿಕ್ಷಣ ಪ್ರವೇಶಕ್ಕೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಶುಲ್ಕ ನಿಗದಿಪಡಿಸಲಾಗುವುದು
ಎಂದರು.