ಆರ್‌ಅಂಡ್‌ಡಿಯಲ್ಲಿ ಓಬಿಸಿ ಕೋಟಾ ಇಲ್ಲ
ಬೆಂಗಳೂರು:
ಮೀಸಲಾತಿ ಕೋಟಾಗಳ ಕುರಿತ ದೂರದೃಷ್ಟಿ ಸಮಿತಿಯು, ಸಂಶೋಧನಾ ಹಾಗೂ ಅಭಿವೃದ್ಧಿ
ಕ್ಷೇತ್ರದಲ್ಲಿ ಓಬಿಸಿ ಕೋಟಾ ಎಂಬ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸಿಎಸ್‌ಐಆರ್, ಮೈಸೂರಿನ
ಸಿಎಫ್‌ಟಿಆರ್‌ಐ, ಗಣಿತ ಅಭಿವೃದ್ಧಿ ಕೇಂದ್ರ, ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್)ಗಳು
ಕೋಟಾದಿಂದ ಮುಕ್ತವಾಗಬೇಕು. ಇದರ ಜೊತೆಗೆ ಐಐಎಂ ನಲ್ಲಿ ಮಾಡುವ ಫೆಲೋಷಿಫ್
ಹಾಗೂ ಕಾರ್ಯಕಾರಿ ಅಭಿವೃದ್ಧಿ ಕಾರ್ಯಕ್ರಮದ ವಿಷಯಗಳಲ್ಲಿ ಕೋಟಾವನ್ನು
ರದ್ದುಗೊಳಿಸಬೇಕು.
ಹಾಗೂ ಎರಡು ವರ್ಷದ
ಪಿಜಿ ಡಿಪ್ಲೋಮ ಕೋರ್ಸುಗಳಿಗೆ ಮಾತ್ರ ಮೀಸಲಾತಿಯನ್ನು ನೀಡಲು ಸಮಿತಿ ಶಿಫಾರಸು ಮಾಡಿದೆ.