ಪ್ರಧಾನಿ-ಜಸ್ವಂತ್
ಸಿಂಗ್ ಮಾತಿನ ಸಮರ
ಸಾಕ್ಷ್ಯಾಧಾರಗಳಿಲ್ಲದೇ ಇದ್ದರೆ ಬರೀ ಮಾತು ಯಾಕೆ ?
ನವದೆಹಲಿ : ಪ್ರಧಾನಿ
ಕಚೇರಿಯಲ್ಲೇ ಗೂಢಚಾರಿಕೆಯ ವಿಷಯದಲ್ಲಿ ಮನಮೋಹನ್ ಸಿಂಗ್ ಹಾಗೂ ಜಸ್ವಂ
ತ್
ಸಿಂಗ್ ಮಾತಿನ ಸಮರ ಮಂಗಳವಾರ ಗಂಭೀರ ಸ್ವರೂಪ ಪಡೆದುಕೊಂಡಿತು. ಈ ಹಿಂದೆ
ತೆರೆಮರೆಯಲ್ಲಷ್ಟೇ ಹೇಳಿಕೆ ಕೊಡುತ್ತಿದ್ದ ಈರ್ವರು ನಾಯಕರು ಈಗ ಸದನದ
ಒಳಗೆ ಮತ್ತು ಹೊರಗೆ ಪರಸ್ಪರ ಆರೋಪಕ್ಕಿಳಿದಿದ್ದಾರೆ.
ಪಿ.ವಿ.ನರಸಿಂಹ ರಾವ್
ಪ್ರಧಾನಿಯಾಗಿದ್ದಾಗ ಅವರ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ವ್ಯಕ್ತಿಯೊಬ್ಬ ಅಮೇರಿಕದ
ಪರವಾಗಿ ಗೂಢಚಾರಿಕೆ ಮಾಡುತ್ತಿದ್ದ ಎಂದು ಜಸ್ವಂತ್ ಸಿಂಗ್ ಇತ್ತೀಚೆಗೆ ಪ್ರಕಟಿಸಿದ
ಪುಸ್ತಕದಲ್ಲಿ ಆರೋಪಿಸಿದ್ದರು.
ಆದರೆ ಗೂಢಚಾರಿ
ಯಾರು ಎಂಬು ಸ್ವತಃ ತಮಗೇ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಸ್ವಂತ್ ಸಿಂಗ್ ವಿವಾದದ
ಕೇಂದ್ರಬಿಂದುವಾಗಿದ್ದರು. ಪ್ರಧಾನಿಯವರು ಗೂಢಚಾರನ ಹೆಸರು ಹೇಳುವಂತೆ
ಎಷ್ಟೇ ಒತ್ತಾಯಿಸಿದರೂ ಜಸ್ವಂತ್ ಸಿಂಗ್ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಲೇ
ಇದ್ದರು. ಇದರಿಂದ ಕೆರಳಿದ ಪ್ರಧಾನಿಯವರು `ನಿಮ್ಮ ಬಳಿ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗ
ಪಡಿಸಿ, ಇಲ್ಲವಾದರೆ ನೀವು ಎಂಥ ವ್ಯಕ್ತಿ ಎಂಬುದನ್ನು ದೇಶವೇ ನಿರ್ಧರಿಸಲಿ' ಎಂದು
ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.