ಬಾಲಕಾರ್ಮಿಕರ
ದುಡಿಮೆಗೆ ಕೇಂದ್ರದ ನಿಷೇಧ
ಅಕ್ಟೋಬರ್
೧೦ರಂದು ಆದೇಶ ಜಾರಿಗೆ
ನವದೆಹಲಿ : ಮನೆ-ಹೋಟೆಲ್‌ಗಳಲ್ಲಿ
೧೪ ವರ್ಷದ ಕೆಳಗಿನ ಮಕ್ಕಳನ್ನು ದುಡಿಸಿಕೊಳ್ಳುವ ಕ್ರಮವನ್ನು ನಿಷೇಧಿಸಿ
ಆಕ್ಟೋಬರ್ ೧೦ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು
ಹೊರಡಿಸಿದೆ.
ಮನೆ,
ಹೋಟೆಲ್‌ಗಳಲ್ಲದೇ ಡಾಬಾ, ರೆಸಾರ್ಟ್, ಫಿಟ್ನೆಸ್ ಕೇಂದ್ರಗಳಲ್ಲೂ ಬಾಲ ಕಾರ್ಮಿಕರನ್ನು
ಬಳಸಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ಅಂಥವರ ಮೇಲೆ ಶಿಸ್ತಿನ ಕ್ರಮ
ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಅಕ್ಟೋಬರ್ ೧೦ ರಿಂದ
ಈ ನಿಷೇಧ ಜಾರಿಗೆ ಬರಲಿದ್ದು ಮಕ್ಕಳನ್ನು ದುಡಿಸಿಕೊಳ್ಳುವ ಮಾಲಿಕರಿಗೆ ಮೂರು
ತಿಂಗಳ ಮುಂಚೆಯೇ ಸೂಚನೆ ನೀಡಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಶಿಕ್ಷೆಗೆ
ಗುರಿಯಾಗಬೇಕಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಅಧಿಸೂಚನೆಯಲ್ಲಿ
ತಿಳಿಸಲಾಗಿದೆ.