Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಮುಂಬಯಿಯಲ್ಲಿ ಕಡಲ ನೀರು ಸಿಹಿ ಸಿಹಿ !

ನೀರು ಕುಡಿಯದಂತೆ ಜನರಿಗೆ ಎಚ್ಚರಿಕೆ

 

ಮುಂಬಯಿ : ಮುಂಬಯಿ ನಗರದ ಮಾಹಿಮ್ ಬೀಚ್‌ನಲ್ಲಿ ಶುಕ್ರವಾರ ರಾತ್ರಿ ಸಮುದ್ರದ ನೀರು ಸಿಹಿಯಾಗಿರುವ ಸುದ್ದಿ ಎಲ್ಲೆಡೆ ಹರಡಲಾರಂಭಿಸಿತು.

 

ರಾತ್ರಿ ಸುಮಾರು ೧೦ ಗಂಟೆಗೆ ಸಮುದ್ರದ ನೀರು ಸಿಹಿಯಾಗಿರುವ ಸುದ್ದಿ ಹರಡುತ್ತಿರುವಂತೆಯೇ ಜನರು ಸಮುದ್ರದಂಡೆಗೆ ನುಗ್ಗಿ ನೀರು ಕುಡಿದು ಪರೀಕ್ಷಿಸಲಾರಂಭಿಸಿದರು. ಹಾಜಿ ಮಖ್‌ದೂಮ್ ಬಾಬಾ ಪುಣ್ಯಸ್ಥಳದ ಬಳಿ ಸಾಮಾನ್ಯವಾಗಿ ಕಡಲ ನೀರು ಸಿಕ್ಕಾಪಟ್ಟೆ ಉಪ್ಪಾಗಿರುತ್ತದೆ. ಆದರೆ ಶುಕ್ರವಾರ ಪರಿಸ್ಥಿತಿ ಉಲ್ಟಾ. ನೀರು ಸಿಹಿ ಸಿಹಿ !

 

ಮಾಹಿಮ್ ಬೀಚ್‌ಗೆ ಜನರು ನುಗ್ಗುತ್ತಿರುವುದನ್ನು ನಿಯಂತ್ರಿಸಲು ಶನಿವಾರ ಪೊಲೀಸರನ್ನು ನೇಮಿಸಲಾಗಿದೆ. ಸಮುದ್ರದ ನೀರು ಸಿಹಿಯಾಗಿರುವುದಕ್ಕೆ ಕಾರಣ ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಆದರೆ ನೀರು ವಿಪರೀತವಾಗಿ ಕಲುಷಿತಗೊಂಡಿರಬಹುದೆಂಬ ಶಂಕೆಯಿಂದ ಆ ನೀರನ್ನು ಯಾರೂ ಕುಡಿಯಬಾರದು ಎಂದು ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com