ರಾಜ್ಯ ಸರ್ಕಾರದಿಂದ ಕೋಕ್ ವಿರುದ್ಧ ಕೇಸು
ಕೋಕ್ ಕಂಪೆನಿ ವಿರುದ್ಧ ಕೇಸು ದಾಖಲಿಸಿದ ಮೊದಲ ರಾಜ್ಯ
ಬೆಂಗಳೂರು : ಕರ್ನಾಟಕ ಸರಕಾರ ಕೋಕೋ ಕೋಲಾ ಕಂಪೆನಿ ವಿರುದ್ಧ
ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದೆ.
ಕೋಕೋ ಕೋಲಾ ಪಾನೀಯದಲ್ಲಿ ಕೀಟನಾಶಕದ ಅಂಶ ಮಿತಿ ಮೀರಿ
ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಹಾರ ಕಲಬರಕೆ
ಕಾಯ್ದೆಯಡಿಯಲ್ಲಿ ಈ ಕೇಸು ದಾಖಲಿಸಲಾಗಿದೆ. ಕರ್ನಾಟಕ ಕೋಕ್ ಕಂಪೆನಿ
ವಿರುದ್ಧ ಕೇಸು ದಾಖಲಿಸಿದ ಮೊತ್ತ ಮೊದಲ ರಾಜ್ಯವೆನಿಸಿದೆ.
ಇದೇ ಮಾದರಿಯಲ್ಲಿ ಥಮ್ಸ್ ಅಪ್ ಮತ್ತು ಮಿರಿಂಡಾ ಕಂಪೆನಿಗಳ ವಿರುದ್ಧವೂ
ಕೇಸು ದಾಖಲಿಸಲಾಗಿದೆ. ಇತರ ತಂಪು ಪಾನೀಯಗಳ ಮಾದರಿಯನ್ನು
ಪರೀಕ್ಷೆಗೆ ಒಳಪಡಿಸಲಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ
ಹೊರಬೀಳಲಿದೆ.