Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

 ಪ್ರವಾಸೋದ್ಯಮದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ

ಒಂದನೇ ಸ್ಥಾನ ಆಂಧ್ರ ಪ್ರದೇಶದ ಪಾಲು

 

`ಕರ್ನಾಟಕದಲ್ಲಿ ಪ್ರವಾಸಿ ತಾಣಗಳೇ ಇಲ್ಲವೆ? ಹೀಗೊಂದು ಪ್ರಶ್ನೆ ಬಹುತೇಕ ಪ್ರವಾಸಿಗರನ್ನು ಪದೇಪದೇ ಕಾಡಿದರೆ ಅದರಲ್ಲಿ ತಪ್ಪಿಲ್ಲ. ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ ರಾಜ್ಯಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಪ್ರವಾಸೋದ್ಯಮದಲ್ಲಿ ರಾಜ್ಯಕ್ಕೆ ೪ನೇ ಸ್ಥಾನ!

 

`ಗಂಧದ ನಾಡು ಚಂದದ ಬೀಡು ಹೀಗೆಲ್ಲಾ ವರ್ಣಿಸುತ್ತಾ ಬಂದಿದ್ದ ರಾಜ್ಯದ ಪ್ರವಾಸೋದ್ಯಮದ ಕಥೆ ಚೆಂದವಿಲ್ಲವಲ್ಲ !

 

ಅದೆಷ್ಟೋ ಪ್ರವಾಸಿ ತಾಣಗಳು ಇನ್ನೂ ಜನರಿಗೆ ತಿಳಿದಿಲ್ಲ. ಗೊತ್ತಿರುವ ಸ್ಥಳಗಳೆಲ್ಲಾ ಪ್ರವಾಸಿಗರಿಗೆ ಮನರಂಜನೆ ನೀಡುತ್ತಿಲ್ಲ. ಪ್ರವಾಸೋದ್ಯಮದಲ್ಲಿ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯವನ್ನು ಹಿಂದಿಕ್ಕಿ ಕ್ರಮವಾಗಿ ಮೊದಲನೇ ಹಾಗೂ ಮೂರನೇ ಸ್ಥಾನದಲ್ಲಿದೆ. ಆದರೆ ದೇಶೀ ಪ್ರವಾಸಿಗರ ಪ್ರಕಾರ ಆಂಧ್ರ ಪ್ರದೇಶವೇ ನಂಬರ್ ವನ್!

 

ಅದೇ ವಿದೇಶಿ ಪ್ರವಾಸಿಗರ ಪ್ರಕಾರ ನವದೆಹಲಿ ದೇಶದಲ್ಲೇ ಅತ್ಯುತ್ತಮ ಪ್ರವಾಸಿ ಕೇಂದ್ರ. ಮಹಾರಾಷ್ಟ್ರಕ್ಕೆ ಎರಡನೇ ಸ್ಥಾನ. ನಂತರದ ಸರದಿ ಉತ್ತರ ಪ್ರದೇಶ ಹಾಗು ರಾಜಸ್ಥಾನ.

 

ಸಾಕಷ್ಟು ಕರಾವಳಿ ಪ್ರದೇಶ, ಮೈಸೂರಿನ ಬೆಡಗು, ಉತ್ತರ ಕರ್ನಾಟಕದಲ್ಲಿ ಶಿಲ್ಪಕಲೆ, ದಕ್ಷಿಣದಲ್ಲಿ ಮಲೆನಾಡಿನ ಮಹಿಮೆ... ಹೀಗೆ ಸಮೃದ್ಧಿಗಳಿಸಿರುವ ಕರ್ನಾಟಕ ನಂಬರ್ ವನ್ ಸ್ಥಾನ ಪಡೆಯಬೇಕು ಎನ್ನುವುದು ನಾಡಿನ ಎಲ್ಲ ಪ್ರವಾಸಿಗರ ಆಶಯ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com