ಟೀಕಾ ಪ್ರವಾಹ ಸಂಕಷ್ಟದಲ್ಲಿ ನರೇಂದ್ರಮೋದಿ
ಸ್ವ ಪಕ್ಷವಾದ ಬಿಜೆಪಿ ಪ್ರಮುಖರಿಂದಲೂ ಟೀಕೆ
ಸೂರತ್
: ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ
ಮುಖ್ಯಮಂತ್ರಿ ನರೇಂದ್ರ ಮೋದಿ ವಿರೋಧಪಕ್ಷಗಳ ಹಾಗೂ ನಾಗರೀಕರ
ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದಾರೆ.
ನೆರೆ
ಸಂತ್ರಸ್ತರಿಗೆ ಸಾಕಷ್ಟು ಪರಿಹಾರಗಳನ್ನು ನೀಡದೇ ಇರುವ, ಹಾಗೆಯೇ
ನೆರೆ ಸಮಸ್ಯೆ ನಿರ್ವಹಣೆಯಲ್ಲಿ ವಿಳಂಬ ತೋರಿರುವ ನರೇಂದ್ರ ಮೋದಿಗೆ
ಸ್ವ ಪಕ್ಷವಾದ ಬಿಜೆಪಿ ಪ್ರಮುಖರಿಂದಲೂ ಟೀಕೆಗೆ ಗುರಿಯಾಗಿದ್ದಾರೆ.
ಸೂರತ್‌ನಲ್ಲಿ
ಪ್ರವಾಹದಿಂದ ಕಂಗಾಲದ ನಾಗರೀಕರು, ಸರಕಾರ ಅತಿ ನಿಧಾನವಾಗಿ
ಪರಿಸ್ಥಿತಿಯನ್ನು ನಿಭಾಯಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭಗಳನ್ನು ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್
ಸಮರ್ಥವಾಗಿ ನಿಭಾಯಿಸುತ್ತಿದ್ದರು ಎಂದು ಬಿಜೆಪಿ ಮುಖಂಡ ಕಾಶೀರಾಮ್
ರಾಣಾ ಬಹಿರಂಗವಾಗಿ ಹೇಳಿರುವುದು ಮೋದಿಗೆ ಅವಮಾನಕಾರಿಯಾಗಿದೆ.