Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಇಂಫಾಲ ಇಸ್ಕಾನ್‌ನಲ್ಲಿ ಬಾಂಬ್ ಸ್ಫೋಟಕ್ಕೆ ೫ ಬಲಿ

ವಿದೇಶಿಯರೂ ಸೇರಿದಂತೆ ೩೦ಕ್ಕೂ ಹೆಚ್ಚು ಮಂದಿ ಗಾಯ

 

ಗುವಹಾಟಿ : ದೇಶದ ಜನತೆ ಮುಂಬೈ ಸರಣಿ ಬಾಂಬ್ ಸ್ಫೋಟದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಇಂಫಾಲದ `ಇಸ್ಕಾನ್ ದೇಗುಲ ಆವರಣದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ.

 

`ಇಸ್ಕಾನ್ ದೇಗುಲದಲ್ಲಿ ಬುಧವಾರ ಸಹಸ್ರಾರು ಮಂದಿ ಭಕ್ತರು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿದ್ದಾಗ ಈ ಬಾಂಬ್ ಸ್ಫೋಟವಾಗಿದೆ. ಸ್ಫೋಟದಲ್ಲಿ ಐವರು ಮೃತರಾಗಿದ್ದು, ಇಸ್ಕಾನ್ ಭಕ್ತರಾದ ಅಮೇರಿಕಾದ ಒಬ್ಬರು ಹಾಗೂ ಸ್ವಿಟ್ಜರ್‌ಲ್ಯಾಂಡಿನ ಇಬ್ಬರು ರಾಷ್ಟ್ರೀಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 

ದೇವಾಲಯ ಇಂಫಾಲ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ಇದೆ. ಗಲಭೆಗ್ರಸ್ತ ಮಣಿಪುರದಲ್ಲಿ ಹಲವಾರು ಉಗ್ರಗಾಮಿ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಬಾಂಬ್ ಸ್ಫೋಟವನ್ನು ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.

 

ದೇಶದ ಈಶಾನ್ಯ ಪ್ರಾಂತ್ಯದಲ್ಲಿರುವ ಅತ್ಯಂತ ಗಲಭೆಗ್ರಸ್ತ ರಾಜ್ಯ ಮಣಿಪುರವಾಗಿದ್ದು, ಅಲ್ಲಿ ಉಗ್ರಗಾಮಿ ಹಾವಳಿಯು ತೀವ್ರವಾಗಿದೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com