೨೦೦೭ರ ವೇಳೆಗೆ ಬರಲಿದೆ ಇಲೆಕ್ಟ್ರಿಕ್ ಆಟೋರಿಕ್ಷಾ
ಅಹಮದಾಬಾದ್: ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ
ಯೋಬೈಕ್ನ
ನಿರ್ಮಾತೃಗಳಾದ ಕಚ್ ಮೂಲದ ಇಲೆಕ್ಟ್ರೊ ಥರ್ಮ್ ಇಂಡಿಯಾ ಸಂಸ್ಥೆಯ
ಆಟೋ ವಿಭಾಗದವರು ಇಲೆಕ್ಟ್ರಾನಿಕ್ ರಿಕ್ಷಾ ತಯಾರಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಕಚ್ ಬಳಿಯಿರುವ ದ್ವಿಚಕ್ರ ವಾಹನ ನಿರ್ಮಾಣ ಘಟಕದಲ್ಲಿ ಸುಮಾರು
೨೦ ಕೋಟಿ ವೆಚ್ಚದಲ್ಲಿ ಇಲೆಕ್ಟ್ರಿಕ್ ರಿಕ್ಷಾ ನಿರ್ಮಾಣ ಕಾರ್ಯ
ಆರಂಭಿಸಲಾಗುವುದು.
ಪ್ರಸ್ತುತ
ಕಚ್ ಘಟಕವು ವರ್ಷಕ್ಕೆ ೧೫,೦೦೦ ರಿಕ್ಷಾ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಇ-ರಿಕ್ಷಾವನ್ನು ಮಾರುಕಟ್ಟೆಗೆ ಏಪ್ರಿಲ್ ೨೦೦೭ ರಲ್ಲಿ
ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
ನಗರದ
ಸವಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಫೆಬ್ರವರಿಯಲ್ಲಿ
ಗುಜರಾತ್‌ನಲ್ಲಿ ಇ-ದ್ವಿಚಕ್ರ ವಾಹನದ ಬಿಡುಗಡೆ ಮಾಡಿದ್ದ ಇಂಡಸ್ ಸಂಸ್ಥೆ
ಮುಂದಿನ ವರ್ಷದ ಮಾರ್ಚ್ ಒಳಗೆ ೧೦ ಲಕ್ಷ ದ್ವಿಚಕ್ರ ವಾಹನ
ಸಿದ್ಧಗೊಳಿಸುವ ನಿರೀಕ್ಷೆಯನ್ನು ಸಂಸ್ಥೆಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.